ಪ್ರಿಸಮ್ ಕಾಲೇಜು ಪ್ರಥಮ

web
Published on

ಧಾರವಾಡ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪೂರ್ಣಾ ಪಿಯು ಕಾಲೇಜು ಆಶ್ರಯದಲ್ಲಿ ಇಲ್ಲಿನ ಕರ್ನಾಟಕ ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಪ್ರಿಸಮ್ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ.
ತಾಲೂಕು ಮಟ್ಟದಲ್ಲಿ ಜಯ ಗಳಿಸಿದ ತಂಡದ ಕ್ರೀಡಾಪಟುಗಳು ಹಾಗೂ ಪ್ರಥಮ ಪಿಯು ವಿದ್ಯಾರ್ಥಿನಿಯರಾದ ಮಾಧುರಿ ಎಸ್, ಅನುಷಾ ಚಿತ್ತಾಪುರ ಹಾಗೂ ಸುಪ್ರೀತಾ ಮೇತ್ರಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ನಿರ್ದೇಶಕರಾದ ಶ್ರೀನಿವಾಸ ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ತಿಮ್ಮನಗೌಡರ, ಪ್ರಾಂಶುಪಾಲ ಎಸ್.ಎಂ. ಹುಲ್ಲೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net