ಪ್ರಿಯಾಂಕ್ ಜನ್ಮದಿನಕ್ಕೆ ಕನ್ನಡಕ ಕೊಡುಗೆ

2211KLb10
Published on

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ೪೬ನೇ ಜನ್ಮದಿನದ ನಿಮಿತ್ತ ಡಾ.ಎಸ್.ಎಂ. ಪಂಡಿತ ರಂಗಮAದಿರದಲ್ಲಿ ಶ್ರವಸ್ತಿ ಟ್ರಸ್ಟ್ ಹಾಗೂ ಅಭಿಮಾನಿಗಳಿಂದ ಶುಕ್ರವಾರ ಕಣ್ಮಣಿ ಕಾರ್ಯಕ್ರಮ ಏರ್ಪಡಿಸಿ ದೃಷ್ಟಿ ದೋಷವಿರುವ ಸರ್ಕಾರಿ ಶಾಲೆ ಮಕ್ಕಳಿಗೆ ಕನ್ನಡಕ ವಿತರಿಸಲಾಯಿತು.

ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಜನ್ಮದಿನ ಜನಸೇವಕನ ದಿನವನ್ನಾಗಿ ಆಚರಿಸಬೇಕು. ಪ್ರಿಯಾಂಕ್ ಶ್ರಮದಿಂದ ಬೆಳೆಯುತ್ತಿದ್ದಾರೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮಾದರಿ ಜಿಲ್ಲೆ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲï ಮಾತನಾಡಿ, ಜನ್ಮದಿನಕ್ಕೆ ಅರ್ಥ ತಂದುಕೊಡುವ ಸಾರ್ಥಕ ಪ್ರಯತ್ನ ಕನ್ನಡಕ ವಿತರಣೆ ಮೂಲಕ ನಡೆದಿದೆ. ಜನ ಕಲ್ಯಾಣದ ಕಾರ್ಯಗಳು ಹೀಗೆ ಸಾಗಲಿ ಎಂದರು.

ಶ್ರವಸ್ತಿ ಟ್ರಸ್ಟ್ ಅಧ್ಯP್ಷÀ ಡಾ.ಕಿರಣ ದೇಶಮುಖ ಮಾತನಾಡಿ, ಪ್ರಿಯಾಂಕ್ ಖರ್ಗೆ ಜನ್ಮದಿನಾಚರಣೆ ನಿರಾಕರಿಸಿದ್ದು, ಬಡವರಿಗೆ ನೆರವು ನೀಡಿ ಎಂದಿದ್ದರು. ಆದ್ದರಿಂದ ಹಲವು ವರ್ಷದಿಂದ ರಕ್ತದಾನ ಶಿಬಿರ, ಕ್ರಿಕೆಟ್ ಟೂರ್ನಾಮೆಂಟ್ ಸೇರಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಸಕ್ತ ವರ್ಷ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕನ್ನಡಕ ವಿತರಿಸಲಾಗುತ್ತಿದೆ ಎಂದರು.

ಸಿದ್ಧಾರ್ಥ ಮೂಕ-ಕಿವುಡ ಮಕ್ಕಳು ಕೇಕ್ ಕತ್ತರಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಶುಭ ಕೋರಿದರು. ಇಕ್ರಾ ಆಂಗ್ಲ ಮಾಧ್ಯಮ ಮತ್ತು ಪ್ರಜ್ಞಾ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಕನ್ನಡಕ ವಿತರಿಸಲಾಯಿತು.

ಪ್ರಮುಖರಾದ ಪ್ರವೀಣ ಪಾಟೀಲ್ ಹರವಾಳ, ಫಾರುಕ್ ಮಾಣಿಯಾರ, ರಾಜೀವ ಜಾನೆ, ಸಿದ್ಧಾರ್ಥ ಕೋರವಾರ, ಸಂತೋಷ ಬಿಲಗುಂದಿ, ಸಂತೋಷ ಪಾಟೀಲ್ ದಣ್ಣೂರ, ಶರಣು ಭೂಸನೂರು, ಶಿವು ಹೊನಗುಂಟಿ, ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ಅಶೋಕ ವೀರನಾಯಕ, ಗೌಸ್ ಮತ್ತಿಮಡು, ಖುಸ್ರೋ ಜಾಗೀರದಾರ, ವಾಣಿಶ್ರೀ ಸಗರಕರ್, ನಿಂಗಮ್ಮ ಕಟ್ಟಿಮನಿ, ಲಿಯಾಖತ್ ಪಟೇಲ್, ಸಚಿನ್ ಶಿರವಾಳ, ಗೌತಮ ಕರೇಕಲ್, ಅರವಿಂದ, ಸೈಯ್ಯದ್ ಅಹ್ಮದ್, ಅಜ್ಮಲ್ ಗೋಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net