ಪ್ರಿಯಾಂಕ ಖರ್ಗೆ ಅಹಂಕಾರ ಮಿತಿಮೀರಿದೆ

Published on

ಚಾಮರಾಜನಗರ: ಗುಜರಾತ್ ಮತ್ತು ಅಸ್ಸಾಂ ಯುವಜನಾಂಗದ ಪ್ರತಿಭೆಯ ಕುರಿತು ಮಾತನಾಡುವ ಪ್ರಿಯಾಂಕ ಖರ್ಗೆ ಅವರ ಅಹಂಕಾರ ಮಿತಿಮೀರಿದ್ದು, ಕಾಂಗ್ರೆಸ್ ಅವಸಾನಕ್ಕೆ ಅವರೇ ಕಾರಣರಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಪ್ರಿಯಾಂಕ ಖರ್ಗೆ ಅವರು ಐಟಿಬಿಟಿ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಬಿಟ್ಟು, ಆರ್‌ಎಸ್‌ಎಸ್ ಅನ್ನು ಟೀಕೆಮಾಡುವ ಕೆಲಸ ಮಾಡುತ್ತಿದ್ದಾರೆ. ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪ್ರತಿಭೆ ಕೊರತೆ ಎಂದು ಹೇಳುವ ಮೂಲಕ ವಿಚಾರಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಜನರನ್ನು ದಾರಿತಪ್ಪಿಸಲು ನವೆಂಬರ್ ಕ್ರಾಂತಿ, ಆರ್‌ಎಸ್‌ಎಸ್ ಹಾಗೂ ಇನ್ನಿತರೆ ವಿಚಾರಗಳನ್ನು ಕಾಂಗ್ರೆಸ್‌ನವರೇ ಹರಿದುಬಿಡುತ್ತಿದ್ದಾರೆ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಆರ್‌ಎಸ್‌ಎಸ್ ಈವರಗೂ ಪಥಸಂಚಲನ ಮಾಡಿಕೊಂಡು ಬರುತ್ತಿದೆ, ಆದರೇ ಈಗ ಪ್ರಿಯಾಂಕ ಖರ್ಗೆ ಅವರು ಸ್ಪರ್ಧಿಸುವ ಚಿತ್ತಾಪುರದಲ್ಲಿ ಯಾವ ಸಮಸ್ಯೆಯಾಗಿದೆ. ಆರ್‌ಎಸ್‌ಎಸ್ ಪಥ ಸಂಚಲನ ಮಾಡುವ ದಿನವೇ ಯಾಕೇ ನೀವು ಪಥಸಂಚಲನ ಮಾಡಬೇಕು. ಬೇರೆ ದಿನದಲ್ಲಿ ಮಾಡಬಹುದಲ್ಲವೇ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಸಚಿವರು ನಾಟಕ ಮಾಡುವುದನ್ನು ಬಿಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net