ಪತ್ನಿ ಕತ್ತು ಕೊಯ್ದು ಹತ್ಯೆಗೆ ಯತ್ನ

Crime
Published on

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಸುಲ್ತಾನಿಪುರದಲ್ಲಿ ಪತಿ, ಪತ್ನಿಯ ಕತ್ತು ಕೊಯ್ದು ಹತ್ಯೆಗೆ ಯತ್ನ ನಡೆದಿದೆ. ಆರೋಪಿ ಪತಿ ದಾದಾ ಪೀರ್ ಮಂಗಳವಾರ ಬೆಳಗಿಜಾವ 2 ಗಂಟೆ ಹೊತ್ತಿನಲ್ಲಿ ಪತ್ನಿ ಫಾತಿಮಾ(34)ಹತ್ಯೆಗೆ ಯತ್ನಿಸಿದ್ದು,ಸಾವು ಬದುಕಿನ ನಡುವೆ ಹೋರಾಡುತ್ತಿ ರುವ ಗಾಯಾಳುವನ್ನು ದಾವಣಗೆರೆ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಫಾತಿಮಾ ಹಾಗೂ ದಾದಾಪೀರ್ ನಡುವೆ ಆಗಾಗ್ಗೆ ಜಗಳ ವಾಗುತ್ತಿತ್ತು ಎನ್ನಲಾಗಿದೆ. ಆರೋಪಿ ಬಂಧನಕ್ಕೆ ಭರಮಸಾಗರ ಪೊಲೀಸರು ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net