ಪ್ರಿನ್ಸಸ್ ರಸ್ತೆ: ವಸ್ತುನಿಷ್ಠವಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳಿ: ಯದುವೀರ್

mysore
Published on

ಮೈಸೂರು: ಪ್ರಿನ್ಸಸ್ ರಸ್ತೆ ಕುರಿತು ಸಮಗ್ರವಾಗಿ ಪರಿಶೀಲಿಸಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ವಸ್ತುನಿಷ್ಠವಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೋರಿದರು.

ಪ್ರಿನ್ಸಸ್ ರಸ್ತೆ ಕುರಿತು ಯಾವುದೇ ದಾಖಲಾತಿ ಇರುವುದಿಲ್ಲ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರನ್ನು ಗುರುವಾರ ಸಂಜೆ ಭೇಟಿ ಮಾಡಿದ ಅವರು, ನಿಮ್ಮ ಹೇಳಿಕೆ ಕುರಿತು ಅನೇಕ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯು ಇತಿಹಾಸ ಹೊಂದಿದ್ದು, ಈ ಕುರಿತು ಅಗತ್ಯ ದಾಖಲೆಗಳೂ ಇವೆ ಎಂದು ಮನವಿಯೊಂದಿಗೆ ದಾಖಲೆ ಸಲ್ಲಿಸಿದರು.

ಈ ರಸ್ತೆಯ ಬಗ್ಗೆ ಹೆಚ್ಚಿನ ದಾಖಲೆಗಳ ಅಗತ್ಯ ಇದ್ದಲ್ಲಿ ನಮ್ಮ ಕಚೇರಿ ಸಂಪರ್ಕಿಸಿ ಪಡೆದುಕೊಳ್ಳಬಹುದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರ ಆಕ್ಷೇಪಣೆ, ದಾಖಲೆಗಳನ್ನು ಸಮಗ್ರವಾಗಿ ಪರಾಮರ್ಶಿಸಿಬೇಕು. ಮೈಸೂರಿನ ಇತಿಹಾಸವನ್ನು ಅವಲೋಕಿಸಬೇಕು. ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net