ಹುಬ್ಬಳ್ಳಿ: ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾಖೆಯಾದ ಹಾವೇರಿ ಜಿಲ್ಲೆಯ ತಡಸ ಗ್ರಾಮದ ಕಮಲಾನಗರದ ಪಂಚವಟಿ ಕ್ಷೇತ್ರದಲ್ಲಿ ನಿರ್ವಿುಸಿರುವ ಶ್ರೀ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆ ಜ. 1ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದ ಮಹಾರಾಜ ಉದ್ಘಾಟಿಸುವರು. ಸ್ವಾಮಿ ಬುದ್ಧಿಯೋಗಾನಂದ ಮಹಾರಾಜ, ಸ್ವಾಮಿ ಗುರುದೇವಚರಣಾನಂದ ಮಹಾರಾಜ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 9.15ಕ್ಕೆ ವಿಷ್ಣು ಸಹಸ್ರನಾಮ, 10 ಗಂಟೆಗೆ ವಿದ್ವಾನ ಸತ್ಯನಾರಾಯಣ ಜೋಶಿ ನೇತೃತ್ವದಲ್ಲಿ ಹೋಮ, 11.30ಕ್ಕೆ ಭಜನೆ, ಮಧ್ಯಾಹ್ನ 12ಗಂಟೆಗೆ ಡಾ. ವಿನಾಯಕ ಕುಲಕರ್ಣಿ ‘ಕಲ್ಪತರು ಶ್ರೀ ರಾಮಕೃಷ್ಣ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ನಂತರ ಮಹಾಮಂಗಳಾರತಿ - ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.