ಪ್ರಾಯೋಗಿಕ ಅನುಭವ ಮುಖ್ಯ: ಮರಲಿಂಗನವರ

15Anand4
Published on
ಪುಸ್ತಕದ ಜ್ಞಾನದ ಜತೆಗೆ ಪ್ರಾಯೋಗಿಕ ಅನುಭವ ಮುಖ್ಯ:ಅನಿಲಕುಮಾರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪುಸ್ತಕಗಳು ಮತ್ತು ಪಠ್ಯಕ್ರಮದ ಪಾತ್ರ ಮಹತ್ವದ್ದಾಗಿದೆ, ಇದರ ಜತೆಗೆ ಪ್ರಾಯೋಗಿಕ ಅನುಭವವು ಅಷ್ಟೇ ಮುಖ್ಯವಾಗಿದೆ ಎಂದು ಕೇಂದ್ರೀಯ ವಿದ್ಯಾಲಯ  ನಂ3 ಶಾಲೆಯ
ಪ್ರಾಂಶುಪಾಲ ಅನಿಲಕುಮಾರ ಹೇಳಿದರು.
 ನಗರದ ಕೇಂದ್ರಿಯ ವಿದ್ಯಾಲಯ ನಂ3 ಶಾಲೆಯ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಶ್ರೀ ಯೋಜನೆ ಅಡಿಯಲ್ಲಿ, ಬೆನ್ನು (ಬ್ಯಾಗ್ ಲೆಸ್ ಡೆ)ರಹಿತ ದಿನ ಕಾರ್ಯಕ್ರಮದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮಕ್ಕೆ ಶನಿವಾರ ಭೇಟಿ ನೀಡಿದರು.ಈ ವೇಳೆ ಮಾತನಾಡಿದ ಅವರು ಈ ಶೈಕ್ಷಣಿಕ ಪ್ರವಾಸದ ಉದ್ದೇಶವು ವಿದ್ಯಾರ್ಥಿಗಳನ್ನು ಪ್ರಕೃತಿಯ ಹತ್ತಿರಕ್ಕೆ ಕೊಂಡೊಯ್ಯುವುದು, ಅವರನ್ನು ತರಗತಿಯ ನಾಲ್ಕು ಗೋಡೆಗಳಿಂದ ಹೊರಗೆ ನಿಜ ಜೀವನದ ಮಹತ್ವ,
ನೈಸರ್ಗಿಕ ಸೌಂದರ್ಯದ ನಡುವೆ ಶಿಕ್ಷಣದ ಹೊಸ ಆಯಾಮ ನೀಡುವುದಾಗಿದೆ ಎಂದರು.
"ಬ್ಯಾಕ್‌ಲೆಸ್ ಡೇ" ಕೇವಲ ಪುಸ್ತಕಗಳಿಲ್ಲದ ದಿನವಲ್ಲ, ಆದರೆ ಇದು ನವೀನ ಪ್ರಯತ್ನವಾಗಿದೆ, ಇದು ಮಕ್ಕಳಿಗೆ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ.   ಇಂತಹ ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳಲ್ಲಿ ತಂಡದ ಕೆಲಸ, ಕುತೂಹಲ, ನಾಯಕತ್ವದ ಸಾಮರ್ಥ್ಯ ಮತ್ತು ಸ್ವಾವಲಂಬನೆಯಂತಹ ಗುಣಗಳನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಶಿಕ್ಷಕರಾದ ನಂದಾ, ಶಿವಪ್ಪ ಮಲ್ಲಿಕಾರ್ಜುನ್, ಮಯೂರಿ , ಅರ್ಚನಾ, ಸೂರಜ್ , ನೂರುದ್ದೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net