ಪ್ರಾಯೋಗಿಕ ಅನುಭವ ಅವಶ್ಯಕ

13 YERRISWAMY 04
Published on

ಬಳ್ಳಾರಿ : ದೈಹಿಕ ಶಿಕ್ಷಣದ ವಿಭಾಗದ ವಿದ್ಯಾರ್ಥಿಗಳು ಪರಿಪೂರ್ಣವಾಗಬೇಕಾದರೆ ವಿವಿಧ ಕ್ರೀಡಾ ಕೂಟಗಳನ್ನು ಸಂಘಟಿಸಿದ ಪ್ರಾಯೋಗಿಕ ಅನುಭವ ಅವಶ್ಯಕ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಜೆ. ತಿಪ್ಪೆರುದ್ರಪ್ಪ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಶುಕ್ರವಾರ ನಡೆದ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಎಂಪಿಇಡಿ ವಿದ್ಯಾರ್ಥಿಗಳು ಇಂಥ ಕ್ರೀಡಾ ಚಟುವಟಿಕೆಗಳು ಸಂಘಟಿಸುವುದರಿಂದ ಮುಂದಿನ ವೃತ್ತಿಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಪ್ರೊ. ಶಶಿಧರ ಕೆಲ್ಲೂರ ಮಾತನಾಡಿದರು. ಓಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆೆ ಬಹುಮಾನ ವಿತರಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net