ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ

6
ಸಂಕೇಶ್ವರ ಪಟ್ಟಣದಲ್ಲಿ ಇಂಜನಿಯರ್​ಗಳನ್ನು ಸನ್ಮಾನಿಸಲಾಯಿತು. ಎ.ಬಿ. ಪಟ್ಟಣಶೆಟ್ಟಿ, ರವೀಂದ್ರ ಗಡಾದ, ಮಹೇಶ ದೇಸಾಯಿ, ಕುಮಾರ ಬಸ್ತವಾಡಿ ಇತರರಿದ್ದರು.
Published on

ಸಂಕೇಶ್ವರ: ಇಂಜನಿಯರ್​ಗಳು ದೇಶದ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕು ಎಂದು ನಿವೃತ್ತ ತಾಪಂ ಇಒ ಎ.ಬಿ. ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಕಣಗಲಿ ಬಡಾವಣೆಯಲ್ಲಿ ಹೈಟೆಕ್​ ಡೆವಲಪರ್ಸ್​ ಹಾಗೂ ಪವನ್​ ಬಿಲ್ಡರ್ಸ್​ ಮತ್ತು ಡೆವಲಪರ್ಸ್​ ವತಿಯಿಂದ ಇಂಜಿನಿಯರ್ಸ್​ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಇಂಜಿನಿಯರ್​ಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪುರಸಭೆ ಮುಖ್ಯ ಅಭಿಯಂತ ರವೀಂದ್ರ ಗಡಾದ ಮಾತನಾಡಿ, ಇಂಜಿನಿಯರ್​ಗಳು ಗುಣಮಟ್ಟದಲ್ಲಿ ಎಂದೂ ಹೊಂದಾಣಿಕೆ ಮಾಡಿಕೊಳ್ಳದೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದರು. ವಿಶ್ವಚೇತನ ವಿದ್ಯಾ ಸಂಸ್ಥೆ ಅಧ್ಯ ಮಹೇಶ ದೇಸಾಯಿ ಮಾತನಾಡಿ, ಇಂಜಿನಿಯರ್​ಗಳು ಶಿಸ್ತು, ಯೋಜನಾಬದ್ಧ ರ್ನಿಣಯ, ಅಭಿವೃದ್ಧಿಪರ ದೂರದೃಷ್ಟಿ ಅಳವಡಿಸಿಕೊಳ್ಳಬೇಕು ಎಂದರು. ಉದ್ಯಮಿ ಪವನ ಕಣಗಲಿ ಮಾತನಾಡಿ, ಯುವ ಇಂಜಿನಿಯರ್​ಗಳಿಗೆ ಹಿರಿಯರು ಹೊಸ ಚಿಂತನೆ, ಆಲೋಚನೆಗಳನ್ನು ನೀಡಬೇಕು ಎಂದರು.

ಸಾಧಕ ಇಂಜಿನಿಯರ್​ಗಳನ್ನು ಸತ್ಕರಿಸಲಾಯಿತು. ಯುವ ಮುಖಂಡ ಕುಮಾರ ಬಸ್ತವಾಡಿ, ಇಂಜಿನಿಯರ್​ಗಳಾದ ಪ್ರಹ್ಲಾದ ಕುರಬೇಟ, ಸಾಧಿಕ್​ ಮೋಮಿನ್​, ಸಲೀಂ ಅತ್ತಾರ, ನಾವೇದ ಅತ್ತಾರ, ಅಮೀರ್​ ಸಯ್ಯದ್​, ಭೂಷಣ ಕುಲಕರ್ಣಿ, ಅಲಿ ಸಯ್ಯದ್​, ಭಾಗವತ ಪ್ರತಿಕ್​, ಬಾಬು ಜಾಧವ, ಬಸವರಾಜ ಕಡಾಡಿ, ಅಯ ಪಾಟೀಲ, ಎಸ್​.ಆರ್​. ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net