

ಬಾಳೆಹೊನ್ನೂರು: ಬಸ್‌ನಲ್ಲಿ ಮಹಿಳೆ ಬಿಟ್ಟು ಹೋಗಿದ್ದ ಹಣವಿದ್ದ ಪರ್ಸ್ ಅನ್ನು ಹಿಂದಿರುಗಿಸಿ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಡೂರು-ತೀರ್ಥಹಳ್ಳಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಬಾಳೆಹೊನ್ನೂರಿನಿಂದ ಜಯಪುರಕ್ಕೆ ತೆರಳುತ್ತಿದ್ದಾಗ ಜಯಪುರ ಸಮೀಪದ ಜಲದುರ್ಗದ ಮಂಜುಳಾ ಎಂಬುವರು ಬಸ್‌ನಲ್ಲಿ ಪರ್ಸ್ ಬಿಟ್ಟು ತೆರಳಿದ್ದರು. ಪರ್ಸ್‌ನಲ್ಲಿ 8 ಸಾವಿರ ರೂಪಾಯಿ ಇತ್ತು. ಇದನ್ನು ಗಮನಿಸಿದ ಬಸ್ ನಿರ್ವಾಹಕ ವಿನ್ಯಾಸ್ ಅವರು ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಮೂಲಕ ಮಹಿಳೆಯನ್ನು ಸಂಪರ್ಕಿಸಿ ಕೆಎಸ್‌ಆರ್‌ಟಿಸಿ ಸಂಚಾರಿ ಅಧೀಕ್ಷಕ ಅಶೋಕ್, ಚಾಲಕ ಹರೀಶ್ ಸಮ್ಮುಖದಲ್ಲಿ ನಗದು, ಪರ್ಸ್ ಹಿಂದಿರುಗಿಸಿದರು.