ಪ್ರಾಮಾಣಿಕ ಸೇವೆಗೆ ಸಲಹೆ

CTD BASAVESHAVRA--00000
Published on

ಚಿತ್ರದುರ್ಗ: ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ವೈದ್ಯರ ದಿನವನ್ನು ಆಚರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ,ವೈದ್ಯಕೀಯ ಪದವಿ ಪೂರೈಸಲು ಜೀವನದ ಅರ್ಧ ಹಾದಿ ಸವೆಸಬೇಕಾಗುತ್ತದೆ. ಹಾಗಾಗಿ ವೈದ್ಯರು ನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು. ಮುಖ್ಯಅತಿಥಿ ಡಾ.ಪಿ.ಎಸ್.ಶಂಕರ್ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದ ಮೌಲ್ಯಗಳನ್ನು ಎಲ್ಲ ವೈದ್ಯರು ಪಾಲಿಸಬೇಕೆಂದರು. ಕಾಲೇಜಿನ ಡೀನ್ ಡಾ.ಪ್ರಶಾಂತ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net