ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾಗಿ ಪಠ್ಯ

3 budikote 1 saamskrutika utsava
Published on

ಬೂದಿಕೋಟೆ: ತ್ರಿಭಾಷ ಸೂತ್ರದಡಿ ಗಡಿಭಾಗದ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್​ನೊಂದಿಗೆ ಸ್ಥಳಿಯ ಭಾಷೆಯಾದ ತೆಲುಗು ಭಾಷೆ ಕಲಿಸುವುದು ಸೂಕ್ತ ಎಂದು ಸಾಹಿತಿ ಹಾಗೂ ವಿಮರ್ಶಕ ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು. ಬಂಗಾರಪೇಟೆ ತಾಲೂಕಿನ ಕನಮನಹಳ್ಳಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗರಿಕೆ ಸಾಂಸತಿಕ ಕೇಂದ್ರದಿಂದ ಗುರುವಾರ ಹಮ್ಮಿಕೊಂಡಿದ್ದ ಗಡಿ ಸಾಂಸತಿಕ ಉತ್ಸವದಲ್ಲಿ ಮಾತನಾಡಿದರು.

ಕೋಲಾರ ಬಹುಭಾಷಾ ಪ್ರದೇಶವಾಗಿದ್ದು, ಇನಲ್ಲಿನ ಜನ ಹಲವಾರು ಭಾಷೆ ಮಾತನಾಡಬಲ್ಲರು. ಒಂದೊಂದು ಭಾಷೆಯೂ ಒಂದೊಂದು ಅಸವಿದ್ದಂತೆ. ಬಹು ಭಾಷೆಯಲ್ಲಿ ಕೀರ್ತನೆ ರಚಿಸಿದ ಕೈವಾರ ತಾತಯ್ಯನವರು ಆಧುನಿಕ ಕನ್ನಡ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಇಂಗ್ಲಿಷ್​ ಅಂತರಾಷ್ಟ್ರೀಯ ಭಾಷೆ ಮತ್ತು ಹಿಂದಿ ರಾಷ್ಟ್ರೀಯ ಭಾಷೆಯೆಂದು ಪ್ರಚಾರ ಮಾಡುತ್ತಿದ್ದಾರೆ. ಇಂಗ್ಲಿಷ್​ ಕೇವಲ ಸಂಪರ್ಕ ಭಾಷೆಯಾಗಿದ್ದು, ನೋಟಿನಲ್ಲಿರುವ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳು ಎಂದರು.

ಸಾರ್ವಜನಿಕ ಶಿಣ ಇಲಾಖೆ ರಾಜ್ಯಾದ್ಯಂತ ಏಕ ಮಾದರಿ ಪಠ್ಯ ಮಾಡದೆ ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾಗಿ ಮಾಡಿ ತ್ರಿಭಾಷೆಗೆ ಆದ್ಯತೆ ಕೊಡುವುದು ಸೂಕ್ತ ಎಂದರು. ರಾಜ್ಯದಲ್ಲೇ ಕೋಲಾರ ಜಿಲ್ಲೆ ಅತಿ ಹೆಚ್ಚು ಕೆರೆಗಳನ್ನು ಹೊಂದಿದ್ದು, ಈಗ ಕೆರೆಗಳು ವಾಸ್ತವದಲ್ಲಿ ನದಿಗಳಾಗಿವೆ. ನಾಗರಿಕತೆ ಹೆಸರಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಜೀವನಶೈಲಿಯೇ ಮಾಯವಾಗಿದ್ದು ಮಳೆ ನೀರಿನಿಂದ ಒಂದು ಕೆರೆ ತುಂಬಿದರೆ ಮತ್ತೊಂದು ತುಂಬುವ ವ್ಯವಸ್ಥೆ ಮಾಯವಾಗಿದೆ. ಮೇಕೆದಾಟು, ಎತ್ತಿನಹೊಳೆ ಯೋಜನೆಗಳು ನಮಗೆ ಕನ್ನಡಿ ಇದ್ದಂತೆ. ಆದ್ದರಿಂದ ರೈತರು ಮನಸ್ಸು ಮಾಡಿ ಕೆರೆಗಳ ಜೀಣೋರ್ದ್ಧಾರವನ್ನು ಹೂಳೆತ್ತುವ ಮೂಲಕ ಮಾಡಬೇಕು ಎಂದರು.

ಬಿಇಒ ಕೆಂಪಯ್ಯ ಮಾತನಾಡಿ, ಗಡಿಭಾಗದಲ್ಲಿ ಸುಮಾರು 18 ಗ್ರಾಮ ಪಂಚಾಯಿತಿಗಳಿದ್ದು, ಪಂಚಾಯಿತಿಗಳ ಮೂಲಕ ಎಲ್ಲ ಶಾಲೆಗಳಲ್ಲೂ ಮೂಲಸೌಕರ್ಯ ಕಲ್ಪಿಸುವಂತಾಗಬೇಕು. ಅಗತ್ಯವಿರುವ ಶಾಲೆಗಳಲ್ಲಿ ಶೌಚಗೃಹ, ನೀರಿನ ತೊಟ್ಟಿ, ಶಾಲಾ ಕೊಠಡಿ ನಿರ್ಮಾಣ ಸೇರಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಸಾಹಿತಿ ನಾ ವೆಂಕಿ, ಬಲಮಂದೆ ಗ್ರಾಮ ಪಂಚಾಯಿತಿ ಉಪಾಧ್ಯೆ ಗೀತಾ ನಾರಾಯಣಸ್ವಾಮಿ, ಪಿಡಿಒ ಮಧುಚಂದ್ರ, ಸದಸ್ಯರಾದ ಸಾವಿತ್ರಿ ಬಾಯಿ, ಸಂಧ್ಯಾಬಾಯಿ, ಮುಖ್ಯಶಿಕ್ಷಕರಾದ ಗಿರಿಜಾ ದೇವಿ, ಅಶೋಕ್​, ಎಸ್​ಡಿಎಂಸಿ ಅಧ್ಯರಾದ ಮನ್ನೋಜಿ ರಾರ್​, ಶ್ರೀನಿವಾಸ್​, ಗರಿಕೆ ಸಾಂಸತಿಕ ಕೇಂದ್ರದ ಟ್ರಸ್ಟಿ ಕಿರಣ್​, ಆದಿಮ ಹರೀಶ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net