ಪ್ರಾಥಮಿಕ ಹಂತದಲ್ಲೇ ಹುಳು ನಿಯಂತ್ರಿಸಿ

8 bgp news photo
Published on

ಬಾಗೇಪಲ್ಲಿ: ತಾಲೂಕಿನ ಕಸಬಾ ಹಾಗೂ ಗೂಳೂರು ಹೋಬಳಿಯ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಕೃಷಿ ಇಲಾಖೆಯ ಸರ್ವೇಕ್ಷಣ ತಂಡ ಮೆಕ್ಕೆಜೋಳ, ತೊಗರಿ, ನೆಲಗಡಲೆ ಬೆಳೆಗಳಲ್ಲಿನ ರೋಗಬಾಧೆಯ ಮಾಹಿತಿ ಸಂಗ್ರಹಿಸಿತು.

ಮುಂಗಾರು ಬೆಳೆಗಳ ನಾಶ ಮಾಡುವ ಕಾಂಡಕೊರಕ ಮತ್ತು ಲಾಡಿಹುಳು ನಿಯಂತ್ರಣಕ್ಕೆ ರೈತರು ಪ್ರಾಥಮಿಕ ಹಂತದಲ್ಲೆ ಮುಂದಾಗಬೇಕು ಎಂದು ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ್ ಸಲಹೆ ನೀಡಿದರು.

ಬೆಳೆಯನ್ನು ಕೀಟಬಾಧೆಯಿಂದ ಸಂರಕ್ಷಿಸಿಕೊಳ್ಳಲು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂಗಾರು ಬೆಳೆಗಳಿಗೆ ಲಾಡಿಹುಳು ಹಾಗೂ ಕಾಂಡಕೊರಕ ಹುಳುಗಳ ಹಾವಳಿ ಹೆಚ್ಚಿನ ಪ್ರಮಾಣದಲ್ಲಿದ್ದು, ನಿಯಂತ್ರಣಕ್ಕೆ ಮುಂದಾಗದಿದ್ದರೆ ಬೆಳೆಯೇ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಮುಂಗಾರು ಚಟುವಟಿಕೆಯ ಪ್ರಾರಂಭದ ಹಂತದಲ್ಲೆ ಕೀಟಗಳನ್ನು ನಾಶಪಡಿಸುವ ಮೂಲಕ ಕೀಟಗಳ ಸಂತಾನವನ್ನು ನಿಯಂತ್ರಿಸಬೇಕು, 1 ಲೀಟರ್ ನೀರಿಗೆ ಹಿಮಾಮೆಟ್ಟಿನ್ ಬೆಂಜೋಹೇಟ್ ಔಷಧ, 5 ಗ್ರಾಂ ಬೇವಿನ ಎಣ್ಣೆ ನೀರಿನೊಂದಿಗೆ ಬೆರಸಿ ಬೆಳೆಗಳಿಗೆ ಸಿಂಪಡಣೆ ಮಾಡುವ ಮೂಲಕ ಹುಳುಗಳ ಬಾಧೆ ನಿಯಂತ್ರಿಸಬಹುದು ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ಡಾ.ಎಲ್.ರೂಪಾ, ಕೃಷಿ ವಿಜ್ಞಾನಿ ಡಾ.ವಿಶ್ವನಾಥ್, ಕೃಷಿ ಉಪಯೋಜನಾ ನಿರ್ದೇಶಕ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್, ತಾಂತ್ರಿಕ ವ್ಯವಸ್ಥಾಪಕ ವಿ.ಬಾಬು, ಉತ್ತೇಜಕಿ ದಿವ್ಯಜೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net