

ಕಲಬುರಗಿ: 2017ರವರೆಗೆ ನೇಮಕವಾದ ಪ್ರಾಥಮಿಕ ಶಿಕ್ಷಕರನ್ನು 1ರಿಂದ 7ನೇ ತರಗತಿಗೆ ನೇಮಕ ಶಿಕ್ಷಕರೆಂದು ಪರಿಗಣಿಸಬೇಕು. ಸಿ ಆ್ಯಂಡ್ ಆರ್ ನಿಯಮ 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು, ಅರ್ಹರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು, ಪದವಿ ಪ್ರಾಥಮಿಕ ಶಾಲೆ ಶಿಕ್ಷಕರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಲ್ಲಯ್ಯ ಗುತ್ತೇದಾರ್, ಬಾಬು ಮೌರ್ಯ, ಈಶ್ವರಗೌಡ ಪಾಟೀಲ್, ದೇವಿಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಅನೀಲಕುಮಾರ ಸುಂಠಾಣ ಇತರರಿದ್ದರು.