ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪ್ರತಿಭಟನೆ

4spt3
Published on

ಸೋಮವಾರಪೇಟೆ: ಹಾಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರ ಹಿಂಬಡ್ತಿ ನೀಡಿದೆ ಎಂದು ಆರೋಪಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಕಾರಿಗಳು ಶುಕ್ರವಾರ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಭಾರತ ಸೇವಾದಳ ಕಾರ್ಯಾಗಾರವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

1 ರಿಂದ 7ನೇ ತರಗತಿವರೆಗೆ ಬೋಸಲು ನೇಮಕಗೊಂಡ ಶಿಕ್ಷಕರನ್ನು ಈಗ 1 ರಿಂದ 5ನೇ ತರಗತಿವರೆಗೆ ಮಾತ್ರ ಬೋಸಲು ನಿಗದಿಗೊಳಿಸಿ ಶಿಕ್ಷಕರಿಗೆ ಹಿಂಬಡ್ತಿ ನೀಡಲಾಗಿದೆ. ಮಕ್ಕಳಿಗೆ ಪಾಠ ಮಾಡುವುದು ನಮ್ಮ ಕೆಲಸ. ಬೇರೆ ಕೆಲಸಗಳನ್ನು ಶಿಕ್ಷಕರು ಮಾಡುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.

1 ರಿಂದ 7ನೇ ತರಗತಿಗೆ ನೇಮಕವಾದ ಯಾವುದೇ ಶಿಕ್ಷಕರು ಈಗ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಗಾವಣೆಯಾಗುವಂತಿಲ್ಲ. ಹುದ್ದೆಗಳು ತನ್ನಿಂದ ತಾನೇ ಜಿಪಿಟಿ ಹುದ್ದೆಗಳಾಗಿ ಪರಿವರ್ತನೆಯಾಗಿವೆ. ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಗೆ ಸ್ಥಳಾವಕಾಶ ಸಿಗದಂತಾಗಿದೆ ಎಂದು ಆರೋಪಿಸಿದರು.

ಪ್ರಾಥಮಿಕ ಹಂತದಲ್ಲಿ ದೈಹಿಕ ಶಿಕ್ಷಣವನ್ನು ಒಂದು ವಿಷಯವಾಗಿ ಸೇರಿಸಿ ಪಠ್ಯ ನೀಡಿದ್ದು, ಬಹುತೇಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಹೀಗಾಗಿ ಕ್ರೀಡಾ ಚಟುವಟಿಕೆಗಳನ್ನು ಸಾಮಾನ್ಯ ಶಿಕ್ಷಕರೇ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಲ್ಲೂ ಎಂ.ಎ, ಎಂಕಾಂ, ಎಂಎಸ್ಸಿ ಬಿಇಡಿ ವ್ಯಾಸಂಗ ಮಾಡಿದವರು ಇದ್ದಾರೆ. ನಮಗೆ ಮಾತ್ರ ಮಾನದಂಡಗಳನ್ನು ರೂಪಿಸಿರುವುದು ಅನ್ಯಾಯ ಎಂದು ಹೇಳಿದರು.

ನಮ್ಮ ಮನವಿಯನ್ನು ಈಗಾಗಲೇ ಶಾಸಕರು, ಜಿಲ್ಲಾಕಾರಿ, ಮತ್ತು ಜಿಲ್ಲಾ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಆದರೆ ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜು ದೂರಿದರು. ಪ್ರತಿಭಟನಾ ಸಂದರ್ಭ ಪದಾಕಾರಿಗಳಾದ ಪ್ರೇಮಾ, ಕವಿತಾ, ಎನ್.ಎಲ್. ಸುರೇಶ್, ಎನ್.ಎಂ. ನಾಗೇಶ್ ಉಮಾದೇವಿ, ಶಿವಕುಮಾರ್, ರವಿ, ಯೋಗೇಶ್, ಆಶಾ, ಸೌಭಾಗ್ಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net