ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆ

dinada chitra - Copy
Published on

ಬೀದರ್: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸುರೇಶ ಟಾಳೆ ಆಯ್ಕೆಯಾಗಿದ್ದಾರೆ.
ಸಂಘದ ಪದಾಧಿಕಾರಿಗಳು: ಅನಿಲಕುಮಾರ ಖಾನಾಪುರೆ, ಸರಸ್ವತಿ ಕಾಡವಾದ (ಉಪಾಧ್ಯಕ್ಷರು), ರಾಜೇಂದ್ರ ಗುಂಗೆ (ಪ್ರಧಾನ ಕಾರ್ಯದರ್ಶಿ), ಆಫ್ರೀನ್, ರಾಜಕುಮಾರ ಮೂಲಗೆ (ಸಂಘಟನಾ ಕಾರ್ಯದರ್ಶಿಗಳು) ಮತ್ತು ಮಹಮ್ಮದ್ ಯಾಸಿರ್ ಅರಾಫತ್ (ಖಜಾಂಚಿ).
ರಾಜ್ಯ ಸಮಿತಿ ಅನುಮೋದನೆ: ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಗೆ ಸಂಘದ ರಾಜ್ಯ ಅಧ್ಯಕ್ಷ ಗುರು ತಿಗಡಿ ಅನುಮೋದನೆ ನೀಡಿದ್ದಾರೆ.
ಸನ್ಮಾನ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ಶಿಕ್ಷಕ-ಶಿಕ್ಷಕಿಯರ ಬ್ಯಾಂಕ್‍ನಲ್ಲಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಮಂಗಳವಾರ ಶಾಲು ಹೊದಿಸಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net