ಪ್ರಾಥಮಿಕ ಶಾಲಾ ಶಿಕ್ಷಕರ ಕೋ -ಆಪರೇಟಿವ್ ಸೊಸೈಟಿ ಉದ್ಘಾಟನೆ ನಾಳೆ

ಪ್ರಾಥಮಿಕ ಶಾಲಾ ಶಿಕ್ಷಕರ ಕೋ -ಆಪರೇಟಿವ್ ಸೊಸೈಟಿ ಉದ್ಘಾಟನೆ ನಾಳೆ
Published on

ಹಾಸನ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆ ಹಾಗೂ ಷೇರು ಪತ್ರ, ಐಡಿ ಕಾರ್ಡ್ ವಿತರಣಾ ಸಮಾರಂಭವನ್ನು ಜುಲೈ 22ರಂದು ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಡಿ. ರಮೇಶ್ ತಿಳಿಸಿದರು.

ಸೊಸೈಟಿ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅವರು ನೆರವೇರಿಸಲಿದ್ದು, ಷೇರುದಾರರಿಗೆ ಷೇರು ಪತ್ರವನ್ನು ಮಾಜಿ ಶಾಸಕ ಪ್ರೀತಂ ಜೆ ಗೌಡ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಲವು ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೋ- ಆಪರೇಟಿವ್ ಸೊಸೈಟಿಯನ್ನು ನೂತನವಾಗಿ ಆರಂಭಿಸಲಾಗಿದೆ. ಈಗಾಗಲೇ ಉತ್ತರ ಬಡಾವಣೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಮೀಪದಲ್ಲಿ ಕಚೇರಿ ಆರಂಭಿಸಲಾಗಿದೆ. ಶಿಕ್ಷಕರು ಒಂದು ಸಾವಿರ ಷೇರು ಹಣ ನೀಡಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಯಾವುದೇ ಲಾಭದ ಉದ್ದೇಶದಿಂದ ಈ ಸೊಸೈಟಿ ಪ್ರಾರಂಭಿಸಿಲ್ಲ. ಶಿಕ್ಷಕರಿಂದ ಶಿಕ್ಷಕರಿಗಾಗಿ ಶಿಕ್ಷಕರಿಗೋಸ್ಕರ ಸ್ಥಾಪಿಸಲಾಗಿದೆ. ವಾರ್ಷಿಕ ಲಾಭಾಂಶವನ್ನು ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರಿಗೂ ಕೂಡ ಹಂಚಿಕೆ ಮಾಡಲಾಗುವುದು. ಸೊಸೈಟಿ ವತಿಯಿಂದ ಲೇಔಟ್ ನಿರ್ಮಾಣ, ನಿವೇಶನ ಸೇರಿದಂತೆ ಇನ್ನಿತರೆ ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಗೌರವಾಧ್ಯಕ್ಷ ವೈ.ಎಸ್. ತಮ್ಮಣ್ಣ ಶೆಟ್ಟಿ, ಉಪಾಧ್ಯಕ್ಷ ಬಿ.ಎಲ್. ಹಿರಿಯಣ್ಣ, ನಿರ್ದೇಶಕರಾದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net