ಪ್ರಾಥಮಿಕ ಚಿಕಿತ್ಸೆ ತಿಳಿದುಕೊಳ್ಳಿ

nrp jci
ಎನ್.ಆರ್.ಪುರ ಜೀವನ್ ಜ್ಯೋತಿ ಶಾಲೆಯಲ್ಲಿ ಡಾ. ವಿನಯ್, ಎಂ.ಕೆ.ರಾಘವೇಂದ್ರ, ಕೆ.ಟಿ.ಎಲ್ದೊ ಅವರನ್ನು ಸನ್ಮಾನಿಸಲಾಯಿತು. ರೆ.ಾ.ಬೆನ್ನಿಮ್ಯಾಥ್ಯೂ, ಪೀಟರ್‌ಬಾಬು, ಮಿಥುನ್ ಗೌಡ, ಪವನ್‌ಕರ್, ನವೀನ್, ಎಂ.ಪಿ.ಮನು, ಎನ್.ಎಂ.ಕಾಂತರಾಜ್ ಇತರರಿದ್ದರು.
Published on

ಎನ್.ಆರ್.ಪುರ: ಅಪಘಾತ ಅಥವಾ ಅವಘಡ ಸಂಭವಿಸಿದಾಗ ಪ್ರಥಮವಾಗಿ ಸ್ಪಂದಿಸಿ ಚಿಕಿತ್ಸೆ ನೀಡುವುದನ್ನು ಪ್ರಥಮ ಚಿಕಿತ್ಸೆ ಎಂಬುದಾಗಿ ಕರೆಯುತ್ತಾರೆ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ತಿಳಿಸಿದರು.

ಪಟ್ಟಣದ ಜೀವನ್ ಜ್ಯೋತಿ ಶಾಲೆಯಲ್ಲಿ ಜೇಸಿ ಸಂಸ್ಥೆ, ಆರೋಗ್ಯ ಇಲಾಖೆ, ಅಗ್ನಿ ಶಾಮಕದಳ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಅರಿವು ಹಾಗೂ ಅಗ್ನಿ ಅವಘಡಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಅಥವಾ ಪ್ರಾಣಿ ಕಚ್ಚಿದಾಗ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು, ಯಾವುದೇ ಔಷಧ ಹಚ್ಚದೆ ಸಮೀಪದ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿ ವೈದ್ಯರು ಸೂಚಿಸುವ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.

ಜೀವನ್ ಜ್ಯೋತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರೆ.ಾ.ಬೆನ್ನಿಮ್ಯಾಥ್ಯೂ ಮಾತನಾಡಿ, ಪ್ರಥಮ ಚಿಕಿತ್ಸೆ ಅತ್ಯವಶ್ಯಕವಾಗಿ ತಿಳಿದಿರಬೇಕು. ಆಪತ್‌ಕಾಲದಲ್ಲಿ ಸಹಾಯವಾಗುವ ಪ್ರಥಮ ಚಿಕಿತ್ಸೆ, ಅಗ್ನಿ ಅವಘಡ ನಿಯಂತ್ರಿಸಲು ಎಲ್ಲರೂ ಸಿದ್ಧವಿರಬೇಕು ಎಂದು ಹೇಳಿದರು.

ಅಗ್ನಿಶಾಮಕ ಇಲಾಖೆಯ ಅಗ್ನಿ ಪ್ರಮುಖ್ ಸಂತೋಷ್‌ಕುಮಾರ್ ಮಾತನಾಡಿ, ಪಂಚಭೂತಗಳಲ್ಲಿ ಶ್ರೇಷ್ಠವಾದ ಅಗ್ನಿ ಜ್ವಾಲೆ ಅತಿರೇಕದ ಸ್ವರೂಪವನ್ನು ಅಗ್ನಿ ಅವಘಡ ಎಂದು ಕರೆಯುತ್ತೇವೆ. ಎಂಥದ್ದೇ ತುರ್ತು ಸಂದರ್ಭದಲ್ಲಿಯೂ ಧೃತಿಗೆಡದೆ ಸಮೀಪದ ಅತ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯ ಸಹಾಯ ಪಡೆಯಿರಿ ಎಂದು ಸಲಹೆ ನೀಡಿದರು. ಅಗ್ನಿ ಅವಘಡ ಸಂಭವಿಸಿದಾಗ ನಿಯಂತ್ರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಜೀವನ್ ಜ್ಯೋತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಟಿ.ಎಲ್ದೋ ಹಾಗೂ ಜೇಸಿ ಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮತ್ತು ನಿಕಟ ಪೂರ್ವ ಅಧ್ಯಕ್ಷ ಎಂ.ಪಿ.ಮನು ಮಾತನಾಡಿದರು.

ಸೆಲ್ಯೂಟ್ ಟು ದ ಸೈಲೆಂಟ್ ವರ್ಕರ್ ಎಂಬ ಕಾರ್ಯಕ್ರಮದಡಿ ಡಾ. ವಿನಯ್ ಹಾಗೂ ಅಗ್ನಿ ಪ್ರಮುಖ್ ಎಂ.ಕೆ.ರಾಘವೇಂದ್ರ ಅವರನ್ನು ಸನ್ಮಾನಿಸಿ, ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಟಿ.ಎಲ್ದೊ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಶಾಲೆ ಪ್ರಾಚಾರ್ಯ ಪೀಟರ್‌ಬಾಬು, ಮಿಥುನ್ ಗೌಡ, ಪವನ್‌ಕರ್, ನವೀನ್, ಸುಹಾಸ್, ಆದರ್ಶ್, ರಚಿತ್, ಲಿಖಿತ್, ರಮೇಶ್, ಬಸವರಾಜ್ ಮೇಟಿ, ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net