

ಚಿತ್ರದುರ್ಗ: ವಿಶಾಲವಾಗಿರುವ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೇ ಪುಣ್ಯವಂತರೆಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿಂಕಲು ಬಸವರಾಜ್ ಹೇಳಿದರು.
ಸಹಕಾರ ಇಲಾಖೆ,ರಾಜ್ಯಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿದ್ದಾರೆಂದರೆ ಅದೊಂದು ಗೌರವ ತರುವಂಥ ವಿಷಯವಾಗಿದ್ದು,ಮುಖ್ಯಕಾರ‌್ಯನಿರ್ವಹಣಾಧಿಕಾರಿಗಳು ತರಬೇತಿ ಸದುಪಯೋಗ ಪಡೆದುಕೊಳ್ಳ ಬೇಕೆಂದರು.
ನಿರ್ದೇಶಕ ಎಚ್.ಎಂ.ದ್ಯಾಮಣ್ಣ ಮಾತನಾಡಿ,ಕೇಂದ್ರ ಸರ್ಕಾರ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀರಣ ಗೊಳಿಸುತ್ತಿದೆ. ಈ ಹಿನ್ನೆಲೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಹಿತಿ ತಂತ್ರಜ್ಞಾನದ ಅರಿವು ಅಗತ್ಯ. ಕಾಲಕಾಲಕ್ಕೆ ಆಗುವಂತಹ ಕಾನೂನು ತಿದ್ದುಪಡಿಗಳನ್ನು ಸಹಕಾರ ಸಂಘಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. ಮುಖ್ಯಅತಿಥಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಪಿ.ಅಂಜನಮೂರ್ತಿ,ಅಧ್ಯಕ್ಷತೆ ವಹಿಸಿದ್ದ ಯೂನಿ ಯನ್ ಅಧ್ಯಕ್ಷ ಜಿ.ಇ.ಅಜ್ಜಪ್ಪ ಮಾತನಾಡಿದರು.
ಯೂನಿಯನ್ ನಿರ್ದೇಶಕ ಕೆ.ಎಚ್.ಜಗನ್ನಾಥ್,ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆ ಉಪನಿರ್ದೇಶಕ ಕೆ.ಮಹೇಶ್ವರಪ್ಪ, ಸ ಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ,ಹೊಳಲ್ಕೆರೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭಾ ಗ್ಯಮ್ಮ,ಡಿಸಿಸಿ ಬ್ಯಾಂಕ್ ಮೇಲ್ಚಿಚಾರಕರಾದ ಎಚ್.ಹಿಮಂತ್‌ರಾಜ್,ಶಂಕರಮೂರ್ತಿ,ಪೃಥ್ವಿ,ಎಂ.ಜೆ.ಮಹೇಶ್ವರ‌್ಪ,ಎ.ಎಂ.ನವೀನ್ ಇದ್ದರು. ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ್‌ಪಾಟೀಲ್ ನಿರೂಪಿಸಿದರು.