ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಶೀಘ್ರವೇ ಶಂಕುಸ್ಥಾಪನೆ

ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸವರ್ಸ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಂ.ಎ. ನಾಗರಾಜ್, ಬಳ್ಳೂರು ಸ್ವಾಮಿಗೌಡ, ದಿನೇಶ್‌ಕುಮಾರ್, ಲೋಕೇಗೌಡ, ಧರ್ಮೇಗೌಡ ಇತರರಿದ್ದರು.
11blrp1
Published on

ಬೇಲೂರು: ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಪರ ಉತ್ತಮ ಕೆಲಸ ಮಾಡುತಿದ್ದು, ಈ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇರುವುದರಿಂದ ಶೀಘ್ರದಲ್ಲೇ ಜಾಗ ಗುರುತಿಸಿ ಸದಸ್ಯರ ಸಹಕಾರದಿಂದ ಶಂಕುಸ್ಥಾಪನೆ ಕೈಗೊಳ್ಳಲಾಗುವುದು ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್ ಹೇಳಿದರು.


ತಾಲೂಕಿನ ಚಿನ್ನೇನಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಚಿನ್ನೇನಹಳ್ಳಿ ಸಹಕಾರಿ ಸಂಘವು ಈ ಭಾಗದ ರೈತರ ಅನುಕೂಲಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಸಂಘದಲ್ಲಿ ಒಟ್ಟು 602 ಸದಸ್ಯರಿದ್ದು, ಎಚ್‌ಡಿಸಿಸಿ ಬ್ಯಾಂಕಿನಿಂದ ಕಳೆದ ವರ್ಷ ಕೆಸಿಸಿ ಯೋಜನೆಯಡಿ 2.45 ಕೋಟಿ ರೂ. ಸಾಲವನ್ನು ಸಂಘದ ಸದಸ್ಯರಿಗೆ ನೀಡಿದೆ. ಸಂಘಕ್ಕೆ ಹಾಲು ಹಾಕುವವರಿಗೆ ಹೈನುಗಾರಿಕೆ ಸಾಲುವಾಗಿ ಸೊಸೈಟಿಗೆ ದುಡಿಮೆಯ ಬಂಡವಾಳವಾಗಿ 47 ಜನರಿಗೆ ತಲಾ 10 ಸಾವಿರ ರೂ.ನಂತೆ ಸಾಲ ನೀಡಲಾಗಿದೆ. ಅಲ್ಲದೆ ಯಶಸ್ವಿ ಯೋಜನೆ ಮರು ಪ್ರಾರಂಭವಾಗಿರುವುದರಿಂದ 285 ಜನರು ಹೆಸರು ನೊಂದಾಯಿಸಿದ್ದಾರೆ. ಜತೆಗೆ ಸಂಘದಿಂದ ರೈತರಿಗೆ ಕಟಾವು ಯಂತ್ರ, ಜೆಸಿಬಿ, ಬೆಳೆಸಾಲ ಇನ್ನಿತರ ಯೋಜನೆಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದರು.


ಚಿನ್ನೇನಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಸಂಘದ ನಿರ್ದೇಶಕರು, ಮುಖಂಡರು ನನ್ನನ್ನು ಅಧ್ಯಕ್ಷನ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಕೃತಘ್ನತೆ ಸಲ್ಲಿಸುತ್ತೇನೆ. ಸಂಘವು 202-23ನೇ ಸಾಲಿನಲ್ಲಿ 4.90 ಕೋಟಿ ರೂ. ವ್ಯವಹಾರ ಮಾಡಿದ್ದು, 2 ಕೋಟಿ ರೂ. ಬೆಳೆ ಸಾಲ ನೀಡಿದ್ದೇವೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಹೈನುಗಾರಿಕೆ ಉತ್ತೇಜಿಸಿ 47 ಮಹಿಳೆಯರಿಗೆ ತಲಾ 10 ಸಾವಿರ ರೂ. ಸಾಲ ನೀಡಿದ್ದೇವೆ. ರಸಗೊಬ್ಬರ ವಹಿವಾಟು ನಿಂತಿದ್ದು, ಅದನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ, ಮೀಸಲಿದ್ದು ಶೀಘ್ರದಲ್ಲೇ ಸ್ಥಳ ಗುರುತಿಸಿ ಕಟ್ಟಡದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.


ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ದಿನೇಶ್‌ಕುಮಾರ್, ನಿವೃತ್ತ ಉಪನ್ಯಾಸಹ ಲೋಕೇಗೌಡ, ನಿರ್ದೇಶಕರಾದ ಧರ್ಮೇಗೌಡ, ಮಹೇಶ್, ರಘು, ರಾಜು, ನಾಗೇಶ್, ತಾಯಮ್ಮ, ಸುಮಾ, ರೇವಣ್ಣಗೌಡ, ಧನಪಾಲ ನಾಯಕ, ಜ್ಯೋತಿ, ಕಾರ್ಯದರ್ಶಿ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net