ಪ್ರಾಣಿಗಳ ಪಾಲನೆಯಲ್ಲಿ ಜಾಗ್ರತೆ ಮುಖ್ಯ

28 SGR 03
ಸಾಗರದ ಪಶು ವೈದ್ಯಕೀಯ ಇಲಾಖೆಯಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆಯಲ್ಲಿ ಸಾಕುನಾಯಿಗೆ ಚುಚ್ಚುಮದ್ದು ನೀಡಲಾಯಿತು. ಗೋಪಾಲಕೃಷ್ಣ ಬೇಳೂರು, ಡಾ. ಮಂಜುನಾಥ್, ಗಣಪತಿ ಮಂಡಗಳಲೆ, ಕುಸುಮಾ ಇತರರಿದ್ದರು.
Published on

ಸಾಗರ: ಸಾಕುಪ್ರಾಣಿಗಳನ್ನು ಜಾಗ್ರತೆಯಿಂದ ಸಾಕಬೇಕು. ಕಾಲಕಾಲಕ್ಕೆ ಅವುಗಳಿಗೆ ಬೇಕಾದ ಚಿಕಿತ್ಸೆ ಕೊಡಿಸಿದರೆ ಅವುಗಳಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಪಶು ವೈದ್ಯಕೀಯ ಇಲಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೂ ಮನುಷ್ಯರಂತೆ ಕಾಯಿಲೆಗಳು ಬರುತ್ತವೆ. ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೇಬಿಸ್‌ಗೆ ಸಾಕುಪ್ರಾಣಿಗಳು ಒಳಗಾದರೆ ಸಾಕಿದವರಿಗೂ ಅಪಾಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಚುಚ್ಚುಮದ್ದು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪಶು ವೈದ್ಯಾಕಾರಿ ಡಾ. ಮಂಜುನಾಥ್ ಮಾತನಾಡಿ, ಮುಂದಿನ ಒಂದು ತಿಂಗಳು ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಬೆಳಗ್ಗೆ 9ರಿಂದ ಚುಚ್ಚುಮದ್ದು ಕೊಡಲು ಪ್ರಾರಂಭವಾಗುತ್ತದೆ. ಇಂದು ಸುಮಾರು 80 ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದೆ ಎಂದರು.

ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕುಸುಮಾ ಸುಬ್ಬಣ್ಣ, ಗಣೇಶ್ ತುಮರಿ, ಸುದರ್ಶನ, ಹೊಳೆಯಪ್ಪ, ಡಾ. ಆಕಾಶ್, ಸುದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net