ಪ್ರಾಣಿ-ಪಕ್ಷಿಗಳಿಗಾಗಿ ತೊಟ್ಟಿಗೆ ನೀರು

chicnholi
Published on

ಕಲಬುರಗಿ: ಬೇಸಿಗೆ ಮತ್ತು ಬರ ಹಿನ್ನೆಲೆಯಲ್ಲಿ ಜಿ¯್ಲೆಯ ಚಿಂಚೋಳಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಮತ್ತು ಪಕ್ಷಿಗಳ ನೀರಿನ ದಾಹ ಇಂಗಿಸಲು ಕೃತಕ ನೀರಿನ ತೊಟ್ಟಿಗೆ ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್ ತಿಳಿಸಿದ್ದಾರೆ.

ಪ್ರತಿ ಸಿಸಿ ಪಾಂಡ್ ೧೫ ರಿಂದ ೨೦ ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ೫-೬ ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇದರಿಂದ ಕಾಡಿನಲ್ಲಿರುವ ಮೂಕ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಿಸಿದಂತೆ ಆಗಲಿದೆ.
ಚಿಂಚೋಳಿ ವನ್ಯಜೀವಿ ವಲಯದ ಶೇರಿಬಿಕನಳ್ಳಿ, ಯಾಕತಾಪುರ, ಸೋಮಲಿಂಗದಳ್ಳಿ ಹಾಗೂ ನೇಚರ್ಲಾ ಅರಣ್ಯ ಪ್ರದೇಶದಲ್ಲಿ ತಲಾ ಎರಡು ಮತ್ತು ಅಂತಾವರA ಹಾಗೂ ಬುರುಗದೊಡ್ಡಿ ವಲಯದಲ್ಲಿ ತಲಾ ಒಂದು ಸೇರಿ ಒಟ್ಟು ೧೦ ಪಾಂಡ್ ನಿರ್ಮಿಸಲಾಗಿದೆ.
ಬೇಸಿಗೆಯಲ್ಲಿ ನಿಯಮಿತವಾಗಿ ನೀರು ಪೂರೈಸುವ ಮೂಲಕ ಕಾಡು ಪ್ರಾಣಿ- ಪಕ್ಷಿಗಳ ನೀರಿನ ದಾಹ ನೀಗಿಸಲು ಇಲಾಖೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net