

ಚಿತ್ರದುರ್ಗ:ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯ ಅಭಿವೃದ್ಧಿಗಾಗಿ ಪ್ರಾಣಿ,ಪಕ್ಷಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಅ ವಕಾಶ ಕಲ್ಪಿಸಲಾಗಿದೆ. ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ 315 ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನು ಪ್ರದರ್ಶಿಸಲಾಗುತ್ತಿದೆ. ಆಸಕ್ತ ಪ್ರಾಣಿ ಪ್ರಿಯರು ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಲ್ಲಿ ಮೃಗಾಲಯದ ಪ್ರಾಣಿ,ಪಕ್ಷಿಗಳ ಆಹಾರ,ವೈದ್ಯಕೀಯ ವೆಚ್ಚ,ಅಭಿ ವೃದ್ಧಿ ಕಾಮಗಾರಿ,ಇತ್ಯಾದಿ ವೆಚ್ಚಗಳ ಸಹಿತ ಮೃಗಾಲಯದ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ.
ದತ್ತು ಮೊತ್ತಕ್ಕೆ ಶೇ.50 ಆದಾಯ ತೆರಿಗೆ ವಿನಾಯಿತಿ ಕೂಡ ಇದೆ. ದತ್ತು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ಚಿತ್ರದುರ್ಗ ಆಡು ಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯಾಧಿಕಾರಿ(7795709638)ಅಥವಾ ಗಸ್ತು ಅರಣ್ಯಪಾಲಕರ(8722618795)ನ್ನು ಸಂಪ ರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.
------