

ಚಿತ್ರದುರ್ಗ: ಹಿಂದುಳಿದವರು,ಶೋಷಿತರು, ಧ್ವನಿಯಿಲ್ಲದವರಿಗೆ ಮಾಜಿ ಮುಖ್ಯಮಂತ್ರಿ ದೇವರಾಜಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ಜಿ ಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಭಾರತವನ್ನು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದೂರದೃಷ್ಟಿ ರಾಜೀವ್‌ಗಾಂಧಿ ಅವರಲ್ಲಿತ್ತು. 18 ವರ್ಷದ ಯುವ ಜನರಿಗೆ ಮತದಾನದ ಹಕ್ಕು ನೀಡಿದರು. ಎಲ್ಲರ ಕೈಯಲ್ಲಿಂದು ಮೊಬೈಲ್‌ಗಳಿವೆ ಎಂದರೆ ಅದು ರಾಜೀವ್ ಅವರ ಕೊಡುಗೆಯನ್ನು ಸ್ಮರಿಸಿದ ಸಚಿವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇತಿಹಾಸ ಕಾಂಗ್ರೆಸ್ಸಿಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಅರಸು ಹಾಗೂ ರಾಜೀವ್ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಯುವ ಪೀಳಿಗೆಗೆ ತಿಳಿಸಬೇಕಿದೆ.ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಮೀಸಲು ಜಾರಿಗೊಳಿಸುವ ಮೂಲಕ ಎಲ್ಲ ವರ್ಗದವರಿಗೂ ಅಧಿಕಾರ ದೊರೆಯು ವಂತೆ ಮಾಡಿದ್ದಾರೆ ಎಂದರು.
ರಾಜೀವ್‌ಗಾಂಧಿ ಪಂ.ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಡಾ.ಕೆ.ಅನಂತ್,ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ,ಪಕ್ಷದ ಇತರೆ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮತ್ತಿತರರು ಮಾತನಾಡಿದರು. ಪಿ.ಕೆ.ಮೀನಾಕ್ಷಿ,ಎಚ್.ಅಂಜಿ ನಪ್ಪ,ಡಿ.ಎನ್.ಮೈಲಾರಪ್ಪ,ಬಿ.ಟಿ.ಜಗದೀಶ್,ಟಿ.ಸ್ವಾಮಿ,ನಜ್ಮತಾಜ್,ಎಸ್.ಎನ್.ರವಿಕುಮಾರ್,ಮಂಜುನಾಥ್,ಪ್ರಕಾಶ್‌ರಾಮನಾಯ್ಕ, ಸೈಯದ್‌ಖುದ್ದೂಸ್,ಶಬ್ಬೀರ್‌ಅಹಮದ್,ಜಿ.ವಿ.ಮಧುಗೌಡ,ಎಚ್.ಮಂಜಪ್ಪ, ಗೀತಾ ನಂದಿನಿಗೌಡ,ಪಿ.ಕೆ.ಪವಿತ್ರಾ,ಮೋಕ್ಷರುದ್ರಸ್ವಾ ಮಿ,ಮುನಿರಾ ಎ.ಮಕಾಂದಾರ್,ಸೈಯದ್‌ಸೈಫುಲ್ಲಾ, ಫೈಲ್ವಾನ್‌ತಿಪ್ಪೇಸ್ವಾಮಿ,ಸುದರ್ಶನ್,ನಾಗ ರಾಜ್,ರಮೇಶ್‌ಬಾಬು,ರಾಜು,ಭಾಗ್ಯ ಮ್ಮ,ಸುಧಾ,ಮೃತ್ಯುಂಜಯ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
(ಸಿಟಿಡಿ 20 ಕಾಂಗ್ರೆಸ್)
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಜನ್ಮ ದಿನಾಚರಣೆ ಅಂಗವಾಗಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಮಾತನಾಡಿದರು. ಎಂ.ಕೆ.ತಾಜ್‌ಪೀರ್,ಡಾ.ಕೆ.ಅನಂತ್,ಕೆ.ಎಂ.ಹಾಲಸ್ವಾಮಿ ಇತರರು ಇದ್ದರು.