ಪ್ರಾಚೀನ ಮಂತ್ರ ನಮೋಕಾರ

10ckd4
Published on

ಚಿಕ್ಕೋಡಿ: ನಮೋಕಾರ ಮಂತ್ರ ಅತ್ಯಂತ ಪ್ರಾಚೀನ ಮಂತ್ರವಾಗಿದ್ದು, ಜೈನರು ಧ್ಯಾನ ಮಾಡುವಾಗ ನಿತ್ಯ ಪಠಿಸುವ ಮೊದಲ ಪ್ರಾರ್ಥನೆಯಾಗಿದೆ. ಈ ಮಂತ್ರ ಪಠಣೆಯಿಂದ ಆಂತರಿಕ ಶುದ್ಧಿಯಾಗುತ್ತದೆ ಎಂದು ಡಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಎಸ್.ಬಣವನೆ ಹೇಳಿದರು.

ಸಮೀಪದ ನಸಲಾಪುರ ಗ್ರಾಮದ ಶ್ರೀ ಪಾರ್ಶ್ವನಾಥ ಸಹಕಾರಿ ಗ್ರೂಪ್ ವತಿಯಿಂದ ಶ್ರೀ ಪಾರ್ಶ್ವನಾಥ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ನಮೋಕಾರ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯರಾದ ರಾಜಗೌಡ ಪಾಟೀಲ, ಚೌಗೌಡ ಪಾಟೀಲ, ಪಾಸಗೌಡ ಪಾಟೀಲ, ಬಾಳಗೌಡ ಪಾಟೀಲ, ಬಾಹುಬಲಿ ಸಮಾಜೆ, ಅರುಣ ನಾಯಿಕ, ಮಹಾದೇವ ಕಾಂಬಳೆ, ಶಿವಾಜಿ ಕುಂಬಾರ, ನಿಂಗಪ್ಪ ಕುಂಬಾರ, ಖಾನಸಾಬ್ ನದಾಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net