

ಬೀದರ್: ಪ್ರಾಚೀನ ಕಲೆಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ರಾಜು ಪಾಯದ್ ಹೇಳಿದರು.
ಇಲ್ಲಿಯ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಚ್ಯ ಪ್ರಜ್ಞೆ ಕುರಿತ ಜಿಲ್ಲಾಮಟ್ಟದ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಲೆ ಹಾಗೂ ವಾಸ್ತು ಶಿಲ್ಪ ನಮ್ಮ ಶ್ರೇಷ್ಠ ಸಂಸ್ಕøತಿಯ ಪ್ರತೀಕವಾಗಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿಷ್ಣುಕಾಂತ ಠಾಕೂರ್, ಸಂಜಪ್ಪ ಮಾನೂರೆ, ಶ್ರೀದೇವಿ ವಿ. ಪಾಟೀಲ ಇದ್ದರು. ಉಮೇಶ ಬಿರಾದಾರ ಸ್ವಾಗತಿಸಿದರು. ಬಲಭೀಮ ಕುಲಕರ್ಣಿ ವಂದಿಸಿದರು.