ಪ್ರಾಚಾರ್ಯರಾಗಿ ಅಧಿಕಾರ ಸ್ವೀಕಾರ

1 vikram 4
Published on

ಧಾರವಾಡ: ನಗರದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ ಕಲ್ಯಾಣ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಕಾಲೇಜಿನ ರಸಾಯನಶಾಸ್ತ್ರ ವಿಷಯದ ಹಿರಿಯ ಪ್ರಾಧ್ಯಾಪಕಿ ಪ್ರೊ. ಮಂಜಲಿ ಸಾಳುಂಕೆ ಸೋಮವಾರ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡರು.
ಪ್ರೊ. ಮಂಜಲಿ ಸಾಳುಂಕೆ ಅವರು 34 ವರ್ಷಗಳಿಂದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ, ಸಂಶೋಧಕಿ, ಮುಖ್ಯಸ್ಥರಾಗಿ ಹಾಗೂ ಕಾಲೇಜಿನ ಜಿಮಖಾನಾ ಅಧ್ಯಕ್ಷರಾಗಿ, ನ್ಯಾಕ್ ವಿಭಾಗದ ಅಧ್ಯಕ್ಷರಾಗಿ ಕಾಲೇಜಿನ ವಿವಿಧ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕರ್ನಾಟಕ ವಿಜ್ಞಾನ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿ ಕಾಲೇಜಿನ ದ್ವಿತೀಯ ಮಹಿಳಾ ಪ್ರಾಚಾರ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net