ಪ್ರಾಂಶುಪಾಲರ ವರ್ಗಾವಣೆ ಆದೇಶ ರದ್ದು

Published on

ಚಿಕ್ಕನಾಯಕನಹಳ್ಳಿ: ತಾಲೂಕಿನ ಮೇಲನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎನ್​.ಸತೀಶ್​ ಹಾಗೂ ಕಿತ್ತೂರು ರಾಣಿ ಚೆನ್ನಮ್ಮವಸತಿ ಶಾಲೆಯ ಪ್ರಾಂಶುಪಾಲ ಜಿ.ಲೋಕೇಶ್​ ಅವರನ್ನು ಕ್ರಮವಾಗಿ ಕುಣಿಗಲ್​ ತಾಲೂಕಿನ ಮಲ್ಲನಾಯಕನಹಳ್ಳಿ, ಪಾವಗಡ ತಾಲೂಕಿನ ಕೊಡಿಗೆಹಳ್ಳಿಯ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಆದೇಶ ಸಂಖ್ಯೆ ಸಕಇ 146 ಎಂಡಿಎಸ್​ 2025 ಅನ್ವಯ ವರ್ಗಾಯಿಸಲಾಗಿತ್ತು.ಸದರಿ ಪ್ರಾಂಶುಪಾಲರ ಕಾರ್ಯಕ್ಷಮತೆ, ಶಾಲಾ ಅಭಿವೃದ್ಧಿಯಲ್ಲಿ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ನೀಡಿದ ಫಲಿತಾಂಶ ಪರಿಗಣಿಸಿ ಅವರ ಸೇವೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ವಸತಿ ಶಾಲೆಗಳಿಗೆ ಬಳಸಿಕೊಳ್ಳಲು ಶಾಸಕ ಸಿ.ಬಿ.ಸುರೇಶ್​ ಬಾಬು ಅವರು ತೀಮಾರ್ನಿಸಿದರು. ಅವರ ವರ್ಗಾವಣೆ ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಜೂ.30ರಂದು ಸಂಖ್ಯೆ 146 ಎಂಡಿಎಸ್​ 2025ರ ಅನ್ವಯ ಆದೇಶವನ್ನು ಹೊರಡಿಸಿ ಹಳೇ ಆದೇಶ ರದ್ದುಪಡಿಸಿದ್ದಾರೆ. ಇದರಿಂದ ಶಾಲೆಯ ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್​ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್​ ಅವರು ಮೊದಲು ಕಾರ್ಯನಿರ್ವಹಿಸಿದ ವಸತಿ ಶಾಲೆಗಳಲ್ಲೇ ಪ್ರಾಂಶುಪಾಲರಾಗಿ ಮುಂದುವರಿಯಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net