ಪ್ರಹ್ಲಾದರಾಜರ ರಥೋತ್ಸವ

kdr ryaru
ಕಡೂರು ಕೋಟೆ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಪ್ರಹ್ಲಾದರಾಜರ ರಥೋತ್ಸವ ಜರುಗಿತು. ಲಕ್ಷ್ಮೀನಾರಾಯಣ, ಮನು, ಪವನ್, ಜೋಷಿ, ಸುರೇಶ್ ಇತರರಿದ್ದರು.
Published on

ಕಡೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂಗಳವಾರ ರಾಯರ ಉತ್ತರರಾಧನೆ ಮತ್ತು ರಥೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಗ್ಗೆ ಗುರುರಾಯರ ಮೃತ್ತಿಕಾ ಬೃಂದಾವನಕ್ಕೆ ಸುಪ್ರಭಾತ ಮತ್ತು ಫಲ ಪಂಚಾಮೃತ ಅಭಿಷೇಕ ನೆರವೇರಿದ ನಂತರ ವಿಶೇಷ ಅಲಂಕಾರ ನಡೆಸಲಾಯಿತು. ನಂತರ ಅಲಂಕೃತ ರಥದಲ್ಲಿ ಪ್ರಹ್ಲಾದರಾಜರ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೋಟೆಯ ಪ್ರಮುಖ ರಸ್ತೆಗಳಲ್ಲಿ ಉತ್ಸವದಲ್ಲಿ ರಥೋತ್ಸವ ನಡೆಸಲಾಯಿತು.

ವಿಪ್ರವೃಂದದಿಂದ ರಾಘವೇಂದ್ರ ಗುರುಸ್ತೋತ್ರ ಪಠಣ ನಡೆಯಿತು. ಮಹಿಳೆಯರು ಗೋಪಾಲ ದಾಸರ ರಥವನೇರಿದ ರಾಘವೇಂದ್ರ ಕೀರ್ತನೆಯನ್ನು ಹಾಡುತ್ತ ಉತ್ಸಾಹದಿಂದ ರಥ ಎಳೆದು ಸಂಭ್ರಮಿಸಿದರು. ರಾಘವೇಂದ್ರ ಸ್ವಾಮಿ ಬೃಂದಾವನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಮನು, ಪವನ್, ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net