ಪ್ರಸ್ತುತ ಪ್ರತಿಯೊಬ್ಬರಿಗೂ ಕೌಶಲ ಅಗತ್ಯ

22Jaggu2
ಬೆಳಗಾವಿ ಆಟೋ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಉಚಿತ ಪಶುಮಿತ್ರ ತರಬೇತಿಗೆ ಶಿವಾನಂದ ನಿರ್ವಾಣಿ ಚಾಲನೆ ನೀಡಿದರು. ಆರ್.ಎಂ. ಬಂಗಾರೆಪ್ಪನವರ, ವಿಜಯಕುಮಾರ ನೇರ್ಲೆಕರ, ಡಾ.ಎನ್.ವಿ. ಅಚಲಕರ, ಅಬ್ದುಲ್ ರಜಾಕ್ ಇತರರಿದ್ದರು.
Published on

ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೌಶಲ ಅಗತ್ಯ ಎಂದು ಹುದಲಿ ಖಾದಿ ಗ್ರಾಮೋದ್ಯೋಗ ಚೇರ್ಮನ್ ಶಿವಾನಂದ ನಿರ್ವಾಣಿ ಹೇಳಿದರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯಲ್ಲಿ ಬುಧವಾರ ಜಿಲ್ಲೆಯ ನಿರುದ್ಯೋಗಿಗಳಿಗೆ 60 ದಿನಗಳ ಉಚಿತ ಪಶುಮಿತ್ರ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೌಶಲಕ್ಕೆ ಇಂದು ಹೆಚ್ಚಿನ ಪ್ರಾಧಾನ್ಯತೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕುಶಲ ಕರ್ಮಿಗಳಾಗಿ ಹೊರಹೊಮ್ಮಬೇಕು ಎಂದರು.

ಪಶುಸಂಗೋಪನೆ ಕೌಶಲಕ್ಕೆ ಹೆಚ್ಚಿನ ಆದ್ಯತೆ ಇದೆ. ಕೇಂದ್ರ ಸರ್ಕಾರವು 75ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಯಾವ ಜಿಲ್ಲೆಯಲ್ಲಿ 100 ಜನ ಸ್ವಾತಂತ್ರೃ ಹೋರಾದಲ್ಲಿ ಭಾಗವಹಿಸಿದ್ದರೋ ಆ ಜಿಲ್ಲೆಯಲ್ಲಿ ಮಾತ್ರ ಪಶುಮಿತ್ರ ತರಬೇತಿ ಹಮ್ಮಿಕೊಳ್ಳಲು ಪರವಾನಗಿ ನೀಡಿದೆ. ಎಲ್ಲ ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕ ಆರ್.ಎಂ. ಬಂಗಾರೆಪ್ಪನವರ ಮಾತನಾಡಿ, ತರಬೇತಿಯು 60 ದಿನಗಳಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿ ಜತೆ ಪಶುಸಂಗೋಪನೆ ಅಳವಡಿಸಿಕೊಂಡು ಯಶಸ್ವಿಗಳಾಗಬೇಕು ಎಂದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಹಾಯಕ ಮಹಾಪ್ರಬಂಧಕ ವಿಜಯಕುಮಾರ ನೇರ್ಲೆಕರ ಮಾತನಾಡಿ, ಕೆನರಾ ಬ್ಯಾಂಕ್ ಮೂಲಕ ಜನೋಪಯೋಗಿ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದರು.

ಡಾ.ಎನ್.ವಿ. ಅಚಲಕರ, ಸಿದ್ದನಗೌಡ ಮಾತನಾಡಿದರು. ರಾಜೇಶ್ವರಿ ದೇವಲಾಪುರ ನಿರೂಪಿಸಿದರು. ಬಸವರಾಜ ಕುಬಸದ, ಅಬ್ದುಲ್ ರಜಾಕ್ ಹಾಗೂ ಪಶು ವೈದ್ಯರು, ಕೆನರಾ ಬ್ಯಾಂಕ್ ಸಿಬ್ಬಂದಿ, ಜಿಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net