ಪ್ರಸನ್ನ ವೆಂಕಟದಾಸರ ಮೂರ್ತಿ ಅನಾವರಣ

bkt-13-6
ಶ್ರೀಪ್ರಸನ್ನ ವೆಂಕಟದಾಸರ ಮೂರ್ತಿ
Published on

ಬಾಗಲಕೋಟೆ: ಶ್ರೀಪ್ರಸನ್ನ ವೆಂಕಟದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ಅವರ ಮೂರ್ತಿ ಅನಾವರಣ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವು ಗುರುವಾರ ವಿಜೃಂಭಣೆಯಿಅದ ಜರುಗಿತು.

ನವನಗರದ ಸೆಕ್ಟರ್ ನಂ.೦೩ರ ಪ್ರಸನ್ನ ವೆಂಕಟದಾಸರ ಸ್ಮಾರಕ ಭವನದ ವೇದಿಕೆಯಲ್ಲಿ ಕಪ್ಪುಶೀಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಪವಮಾನ ಹೋಮವೂ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಅನಾವರಣಗೊಳಿಸಲಾಯಿತು.

ನಂತರ ಬೆಂಗಳೂರಿನ ಶ್ರೀವಾರಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ದಾಸರಪದಗಳನ್ನು ಹಾಡಿದರು. ಶ್ರೀನಿವಾಸ ಕಲ್ಯಾಣೋತ್ಸದ ಕೊನೆಯಲ್ಲಿ ನೆರೆದವರು ಹೆಜ್ಜೆಹಾಕಿ ಸಂಭ್ರಮಿಸಿದರು.

ಮಂತ್ರಾಲಯದ ಮಂತ್ರಾಲಯದ ಶ್ರೀಗುರು ಸಾರ್ವಭೌಮ ಹರಿದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಕೆ.ಅಪ್ಪಣಾಚಾರ್ಯ, ಹಿರಿಯ ವಿಜ್ಞಾನಿ, ಸಂಶೋಧಕ ಡಾ.ಸುಭಾಸ ಕಾಖಂಡಕಿ, ಹಿರಿಯ ಸಾಹಿತಿ ಡಾ.ರೇಖಾ ಕಾಖಂಡಕಿ, ಗಾಯಕ ಪಂ. ಅನಂತ ಕುಲಕರ್ಣಿ, ಗುರುರಾಜ ಕುಲಕರ್ಣಿ, ವಿಠ್ಠಲಾಚಾರ್ಯ ಕಾಖಂಡಕಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net