ಪ್ರಸನ್ನ ಭಾವಕ್ಕೆ ಸಹಜ ಶಿವಯೋಗವೇ ಮಾರ್ಗ

CTD SHIVAYOGA-MURUGA...
Published on

ಚಿತ್ರದುರ್ಗ: ಬಸವಣ್ಣ ನಮಗೆ ಸರಳ ಸಹಜ ಶಿವಯೋಗವನ್ನು ಹೇಳಿಕೊಟ್ಟಿದ್ದಾರೆ ಎಂದು ಗುರುಮಠಕಲ್ ಖಾಸ ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವ, ಶ್ರೀ ಜಯದೇವ ಶ್ರೀ 150ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಅನುಭವ ಮಂಟಪದಲ್ಲಿ ಏರ್ಪಡಿಸಿದ್ದ ಸಹಜ ಶಿವಯೋಗ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಶಿವಯೋಗ ಏಕತೆ, ಪ್ರಸನ್ನ ಭಾವವನ್ನು ನೀಡುತ್ತದೆ. ಶಿವ ಎಂದರೆ ಪ್ರಸನ್ನಭಾವ, ಮಂಗಳಕರ, ಶುಭಕರ, ಯೋಗವೆಂದರೆ ಎಲ್ಲರೂ ಒಂದೆಡೆ ಸೇರುವುದು ಎಂದರ್ಥವೆಂದರು.
ಹರಿಹರ ವೀರಶೈವ ಪಂಚಸಾಲಿ ಗುರುಪೀಠದ ವಚನಾನಂದ ಶ್ರೀ ಮಾತನಾಡಿ, ನನಗೆ ಮುರುಘಾಮಠ, ಮುರುಘೇಶ ಎಂದರೆ ಪ್ರಾಣ. ಬಸವೇಶ್ವರ, ಮುರುಘೇಶ, ಮಹಾಂತೇಶ ನನ್ನ ಮೂರು ಮಂತ್ರಗಳು ಎಂದರು.
ಲೇಖಕ ಎಚ್. ಆನಂದಕುಮಾರ್ ಅವರು ಮಾತನಾಡಿ, ಶ್ರೀಮಠದ ಇತಿಹಾಸದ ಬಗ್ಗೆ ಬರೆದದ್ದು ನನ್ನ ಪುಣ್ಯವೆಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ, ಬಸವಪ್ರಭು ಶ್ರೀ, ಸಿದ್ದಲಿಂಗೇಶ್ವರ ಶ್ರೀ, ಬಸವರಾಜೇಶ್ವರಿ ಶ್ರೀ, ಶ್ರೀಕೃಷ್ಣಯಾದವಾನಂದ ಶ್ರೀ, ಶ್ರೀ ಬಸವ ಮಾಚಿದೇವ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಕಲಬುರಗಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಕ್ಕಂಚಿ, ಅಕ್ಷಯ ಪ್ರಿಂಟರ್ಸ್‌ನ ರೇವಣಸಿದ್ದಯ್ಯಮಠ, ಚನ್ನಗಿರಿ ಲಿಂಗಾಯತ ಮಹಾಸಭಾ ಅಧ್ಯಕ್ಷೆ ಮಂಜುಳಾ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net