

ಬಳ್ಳಾರಿ : ಇಲ್ಲಿನ ಸಂತ ಜಾನ್ ಪ್ರೌಢಶಾಲೆಯಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆದ ಪ್ರಶ್ನೆಪತ್ರಿಕೆ 1ರಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಶಾಲೆಯ ಹದಿನೆಂಟನೇ ಕೊಠಡಿಯಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳ ಸಹಿ ಪಡೆದು, ಅವರ ಸಮ್ಮುಖದಲ್ಲಿಯೇ ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯಬೇಕು. ಆದರೆ, ಕೊಠಡಿಗೆ ಬರುವ ಮುನ್ನವೇ ಬಂಡಲ್ ಶೀಲ್ ತೆರೆದಿದೆ ಎಂದು ಪರೀಕ್ಷಾರ್ಥಿಗಳು ಮೇಲ್ವಿಚಾರಕರನ್ನು ಪ್ರಶ್ನಿಸಿದ್ದರು. ಆದರೆ, ಅಧಿಕಾರಿಗಳು ಪರೀಕ್ಷೆ ಮುಗಿದ ಬಳಿಕ ಚರ್ಚಿಸೋಣ ಎಂದು ಸಮಜಾಯಿಷಿ ನೀಡಿದ ಹಿನ್ನಲೆ ಅಭ್ಯರ್ಥಿಗಳು ಕೆಲ ಕಾಲ ಸರ್ಕಾರ ಹಾಗೂ ಕೆಪಿಎಸ್‌ಸಿ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿ, ತಹಸೀಲ್ದಾರ್ ಗುರುರಾಜ್ ಅವರ ಮೂಲಕ ಕೆಪಿಎಸ್‌ಸಿಗೆ ಮನವಿ ಸಲ್ಲಿಸಿದರು.
ಕೋಟ್… ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನವೇ ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯಲಾಗಿತ್ತು. ಅಲ್ಲದೆ, ಅದೇ ಕೊಠಡಿಯಲ್ಲಿ ಗೈರಾದ ಅಭ್ಯರ್ಥಿಯ ಬಂಡಲ್ ತೆರೆದಿರುವುದರಿಂದ ಅನುಮಾನ ಮೂಡಿದೆ. ಕೆಪಿಎಸ್‌ಸಿ ಕೂಡಲೇ ಮರು ಪರೀಕ್ಷೆ ನಡೆಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
ಕೋಟ್…. ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆದಿದೆ ಎಂದು ಕೆಲ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅದು ಕೇವಲ ಬಂಡಲ್ ಗಮ್ ಮಾತ್ರ ಒಪನ್ ಆಗಿದೆ. ಪ್ರಾಥಮಿಕ ಹಂತದಲ್ಲಿ ಗಮನಿಸಿದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅದರೂ, ಅಭ್ಯರ್ಥಿಗಳು ಕೆಪಿಎಸ್‌ಸಿಗೆ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.