ಪ್ರಶಿಣಾರ್ಥಿಗಳಿಗೆ ತರಬೇತಿ ಅಗತ್ಯ

3
ರಾಮದುರ್ಗ ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಶಿಣ ಕಾಲೇಜಿನಲ್ಲಿ ಏರ್ಪಡಿಸಿದ್ದ ಟಿಇಟಿ ಹಾಗೂ ಸಿಇಟಿ ತರಬೇತಿ ಕಾರ್ಯಾಗಾರವನ್ನು ಸಂಸ್ಥೆಯ ಸದಸ್ಯ ವಿ.ಜಿ. ಬೆಲವಾಡ ಉದ್ಘಾಟಿಸಿದರು. ರಮೇಶ ಆವೋಜಿ, ಪಿ.ಎಂ. ಜಗತಾಪ, ಪ್ರೊ.ಎಸ್​. ಲೇಪಾ , ಡಾ.ಆರ್​.ಎಲ್​. ಕುಳ್ಳೂರ ಇತರರಿದ್ದರು.
Published on

ರಾಮದುರ್ಗ: ಪ್ರಶಿಣಾರ್ಥಿಗಳಿಗೆ ತರಬೇತಿ ಹಂತದಲ್ಲಿಯೇ ಟಿಇಟಿ ಹಾಗೂ ಸಿಇಟಿ ತರಬೇತಿ ಕಾರ್ಯಾಗಾರದ ಅಗತ್ಯವಿದೆ. ವಿದ್ಯಾ ಪ್ರಸಾರಕ ಸಮಿತಿ ಪ್ರಶಿಣಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವುದು ಶ್ಲಾನೀಯ ಎಂದು ತಿಗರಿಯ ಜಿಪಿಟಿ ಶಿಕ ರಮೇಶ ಆವೋಜಿ ಹೇಳಿದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಶಿಣ ಮಹಾವಿದ್ಯಾಲಯದಲ್ಲಿ ಭಾನುವಾರ ಆರಂಭಗೊಂಡ ಎರಡು ದಿನಗಳ ಟಿಇಟಿ ಹಾಗೂ ಸಿಇಟಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಶಿಣಾರ್ಥಿಗಳು ಸ್ಪರ್ಧಾತ್ಮಕ ಪರೀೆ ಎದುರಿಸಿದ ನಂತರವೇ ವತ್ತಿ ಜೀವನ ಪ್ರಾರಂಭವಾಗಲಿದೆ. ಪರೀಾ ತಯಾರಿಯ ವಿಧಾನ ಅರಿತುಕೊಂಡು ಸಮಯಕ್ಕೆ ಸರಿಯಾಗಿ ಅಧ್ಯಯನ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು.
ಅಧ್ಯತೆ ವಹಿಸಿ ಮಾತನಾಡಿದ ಸಂಸ್ಥೆ ಸದಸ್ಯ ಪಿ.ಎಂ. ಜಗತಾಪ, ಪ್ರಶಿಣಾರ್ಥಿಗಳು ತರಬೇತಿ ಹಂತದಲ್ಲಿ ನಡೆಸುವ ಎಲ್ಲ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಸಂಯೋಜಕ ಪ್ರೊ.ಎಸ್​. ಲೇಪಾ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಸದಸ್ಯ ವಿ.ಜಿ.ಬೆಲವಾಡ, ಪ್ರಾಚಾರ್ಯ ಡಾ.ಆರ್​.ಎಲ್​. ಕುಳ್ಳೂರ, ಜಿಮಖಾನ್​ ಉಪಾಧ್ಯ ಪ್ರೊ.ಎಂ.ಆರ್​. ಕುಂಬಾರ, ಕಾರ್ಯಕ್ರಮ ಸಂಯೋಜಕ ಡಾ.ಎನ್​.ಎನ್​. ವಾಳ್ವೇಕರ, ಪ್ರೊ.ಎಸ್​.ಎಂ. ನಾಯಕ, ಪ್ರೊ.ಜಿ.ಪಿ. ಗಡದೆ, ಡಾ.ವಿ.ಬಿ. ವಗ್ಗರ, ಪ್ರೊ.ಜಿ.ಬಿ. ಬಟಕುರ್ಕಿ, ಪ್ರೊ.ಎಂ.ಎಚ್​. ರಾಠೋಡ. ಪ್ರೊ.ಎ.ಟಿ. ಲಮಾಣಿ, ಉಪನ್ಯಾಸಕಿ ಶಿವಲೀಲಾ ಗೊಲನ್ನವರ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net