ಪ್ರಶಸ್ತಿಯ ಹಣವನ್ನು ಶಾಲೆಗೆ ನೀಡಿದ ಶಿಕ್ಷಕಿ

9 ss1jancy vitarane
Published on

ಶನಿವಾರಸಂತೆ: ಇತ್ತೀಚೆಗೆ ಕೊಡಗು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಸೋಮವಾರಪೇಟೆ ತಾಲೂಕಿನ ಬಡುಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಾನ್ಸಿ ಅವರು ತಮಗೆ ದೊರೆತ ಪ್ರಶಸ್ತಿಯ ಹಣವನ್ನು ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ನಿಧಿಗೆ ನೀಡುವ ಮೂಲಕ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಶಿಕ್ಷಕಿ ಜಾನ್ಸಿ ಅವರು ಹಲವಾರು ವರ್ಷಗಳಿಂದ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ಅಭಿವೃದ್ಧಿಪಡಿಸುತ್ತಿರುವುದರ ಜತೆಗೆ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಧನ ಸಹಾಯ ಸೇರಿದಂತೆ ಸಮವಸ್ತ್ರ, ಪುಸ್ತಕ, ಲೇಖನಿ ಪರಿಕರಗಳನ್ನು ನೀಡಿ ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net