ಪ್ರಶಸ್ತಿಗೆ ಇಬ್ಬರು ಸಾಧಕರ ಆಯ್ಕೆ

Published on

ಚಾಮರಾಜನಗರ: ರಾಜ್ಯ ಸರ್ಕಾರ ವಿವಿಧ ಸಾಧಕರ ಹೆಸರಿನಲ್ಲಿ ಕೊಡಮಾಡುವ 2014-15 ನೇ ವಿವಿಧ ಪ್ರಶಸ್ತಿಗಳಿಗೆ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ.

ಗಾಯನ ವಿಭಾಗದಲ್ಲಿ ಕೊಡಮಾಡುವ ಸಂತ ಶಿಶುನಾಳ ಶರೀಫ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಸುಗಮ ಸಂಗೀತ ಗಾಯಕ ಪ್ರೊ.ಎಸ್.ಮಲ್ಲಣ್ಣ ಹಾಗೂ ಜಾನಪದ ಶ್ರೀ ಪ್ರಶಸ್ತಿಗೆ ಜಾನಪದ ಕಲಾವಿದ ದೊಡ್ಡಗವಿ ಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಸುಗಮ ಸಂಗೀತ ಕ್ಷೇತ್ರದಲ್ಲಿ 1965ರಿಂದಲೂ ಸೇವೆ ಸಲ್ಲಿಸುತ್ತಿರುವ ಮಲ್ಲಣ್ಣ ಅವರು, ವಚನ ಸಂಗೀತ, ಶಿಶುನಾಳ ತತ್ವ ಪದಗಳು ಹಾಗೂ ದಾಸ ಶ್ರೇಷ್ಠರುಗ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ 1995 ರಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದೊಡ್ಡಗವಿ ಬಸಪ್ಪ ಅವರು ನೀಲಗಾರರ ತಂಬೂರಿ ಶೈಲಿಯ ಜಾನಪದ ಕಾವ್ಯಗಳನ್ನು ಹಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net