ಪ್ರಶಸ್ತಿಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ಜ್ಞಾನ ಮಂದಾರ ಟ್ರಸ್ಟ್ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಚೇತನ ಮತ್ತು ಭಾರತನಾಟ್ಯ, ಸಂಗೀತ, ಕ್ರೀಡೆ, ಯಕ್ಷಗಾನ, ಚಿತ್ರಕಲೆ ಪ್ರತಿಭೆ ಇರುವ ಮಕ್ಕಳಿಗೆ ಅರಳು ಮಲ್ಲಿಗೆ ರಾಜ್ಯ ಪುರಸ್ಕಾರವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ನಿರ್ದೇಶಕರು, ನಂ.15 ಬಿಎಲ್ ರಸ್ತೆ, ಎಂ.ಎಸ್.ಆರ್ ನಗರ, ಮತ್ತಿಕೆರೆ, ಬೆಂಗಳೂರು-54 ಇಲ್ಲಿಗೆ ಜೂ.30ರೊಳಗೆ ಇತ್ತೀಚೆಗಿನ ಭಾವಚಿತ್ರ, ವೈಯಕ್ತಿಕ ವಿವರಗಳನ್ನು ಕಳುಹಿಸಿಕೊಡಲು ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net