ಬಳ್ಳಾರಿ : ಡಿ. 03ರಂದು ವಿಶ್ವ ವಿಶೇಷಚೇತನರ ದಿನಾಚರಣೆಯ ಪ್ರಯುಕ್ತ ಪ್ರಸ್ತಕ ಸಾಲಿಗೆ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ವಿಶೇಷ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.ಅ. 15 ರೊಳಗಾಗಿ ಆಯಾ ತಾಲೂಕು ಮಟ್ಟದ ಎಂಆರ್‌ಡಬ್ಲ್ಯೂ ಗಳ ಮುಖಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ಬಳ್ಳಾರಿ ಮೊ. 8880875620, ಸಂಡೂರು ಮೊ. 9632052270, ಸಿರುಗುಪ್ಪ 9743509698 ಮತ್ತು ಕುರುಗೋಡು 9538000887 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.