ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ

Published on

ಕೊರಟಗೆರೆ: ಸಾಧನೆಯ ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚುಸುತ್ತದೆ. ಅದನ್ನು ಉಳಿಸಿಕೊಳ್ಳುವ ಕರ್ತವ್ಯ ಮಹತ್ವವಾದುದು ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸತ ಕೊರಟಗೆರೆ ಸಿಪಿಐ ಆರ್​.ಪಿ.ಅನಿಲ್​ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಕಚೇರಿಯಲ್ಲಿ ಸಂದಿಂದ ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸ್​ ಇಲಾಖೆಯಲ್ಲಿ ರಾಷ್ಟ್ರಪ್ರಶಸ್ತಿ ಪದವಿ ಅತ್ಯುತ್ತಮವಾದುದು. ಈ ಪ್ರಶಸ್ತಿ ರಾಜ್ಯದಲ್ಲಿ ಪ್ರತಿವರ್ಷ 37 ಮಂದಿಗೆ ಮಾತ್ರ ದೊರೆಯುತ್ತದೆ. ಇಂತಹ ಪ್ರಶಸ್ತಿಗಳಿಂದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗುತ್ತದೆ. ಕೊರಟಗೆರೆ ತಾಲೂಕಿನಲ್ಲಿ ಪೊಲೀಸ್​ ಮತ್ತು ಪತ್ರಕರ್ತರ ಸಂ ಸ್ನೇಹಮಯವಾಗಿ ಕೆಲಸ ಮಾಡುತ್ತಿದೆ. ಎಷ್ಟೋ ಪ್ರಕರಣಗಳಲ್ಲಿ ಪತ್ರಕರ್ತರು ಸಹಕಾರದಿಂದ ಪತ್ತೆಯಾಗಲು ಸಹಕಾರಿಯಾಗಿದೆ. ನನ್ನನ್ನು ಸನ್ಮಾನಿಸಿದ ತಾಲೂಕು ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಕ್ಕೆ ಧನ್ಯವಾದಗಳನ್ನು ತಿಳಿಸಿದರು.

ತಹಸೀಲ್ದಾರ್​ ಮಂಜುನಾಥ್​ ಮಾತನಾಡಿ, ಸಿಪಿಐ ಅನಿಲ್​ ಅವರ ಕಾರ್ಯದಕ್ಷತೆಯನ್ನು ನಾನು ಹಲವು ವರ್ಷಗಳ ಹಿಂದೆ ಬೆಂಗಳೂರಿನ ಶ್ರೀರಾಮಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನೋಡಿದ್ದೇನೆ. ಇತ್ತೀಚೆಗೆ ಅತ್ತೆಯನ್ನು ತುಂಡರಿಸಿ ತಾಲೂಕಿನ ಮೂಲೆ ಮೂಲೆಗೆ ಎಸೆದಿದ್ದ ವೈದ್ಯ ಅಳಿಯನ ಪ್ರಕರಣವನ್ನು ಸಿಪಿಐ ಅವರು ಅವರ ತಂಡದೊಂದಿಗೆ ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದರು. ಅಧಿಕಾರಿಗಳಿಗೆ ಯಾವುದೇ ಪ್ರಶಂಸೆ ಸಿಗಲಿ ಬಿಡಲಿ ಅವರ ಕರ್ತವ್ಯವನ್ನು ಮಾಡೀಯೇ ಮಾಡುತ್ತಾರೆ ಎಂದರು.

ಸಂದ ಅಧ್ಯಕ್ಷ ಕೆ.ವಿ.ಪುರಷೋತ್ತಮ್​ ಮಾತನಾಡಿದರು. ಪಿಎಸ್​ಐ ತೀಥೇಶ್​, ಗೃಹ ಸಚಿವರ ಆಪ್ತಸಹಾಕ ಅರವಿಂದ್​, ಆರ್​.ಐ.ಬಸವರಾಜು, ಜಿಲ್ಲಾ ಸಂದ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್​.ಮೂರ್ತಿ, ತಾಲೂಕು ಸಂದ ಉಪಾಧ್ಯಕ್ಷ ಹೆಚ್​.ಎನ್​.ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net