ಪ್ರಶಸ್ತಿ ಪ್ರಧಾನ

29 YERRISWAMY 04
Published on

ಬಳ್ಳಾರಿ : ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಆಸೋಸಿಯೇಷನ್ ವತಿಯಿಂದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿ ಅಂಗವಾಗಿ ಆ. 3 ಮತ್ತು 4 ರಂದು ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಾಟಕೋತ್ಸವ ಆಯೋಜಿಸಲಾಗಿದೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರನ್ನು ಬಳ್ಳಾರಿ ರಾಘವ ಹೆಸರಿನಲ್ಲಿ ಸಂಸ್ಥೆ ವತಿಯಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನ ತಲಾ ಒಬ್ಬರಿಗೆ ಬಳ್ಳಾರಿ ರಾಘವ ಪ್ರಶಸ್ತಿ ನೀಡಿ ಗೌರವಿಸಲಾವುದು. ಈ ಬಾರಿ ಬೆಂಗಳೂರಿನ ರಾಜೇಂದ್ರ ಕಾರಂತ, ಆಂಧ್ರಪದೇಶದ ತಿರುಪತಿಯ ಕೋನೆಟಿ ಸುಬ್ಬರಾಜು ಅವರನ್ನು ಸಂಸ್ಥೆ ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಎರಡು ದಿನ ಸಂಜೆ ನಾಟಕಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net