ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದನೆ

1
Published on

ಗೋಕಾಕ: ಟಪ್ರಭಾ ನದಿ ಪ್ರವಾಹದಲ್ಲಿ ಮೃತಪಟ್ಟ ತಾಲೂಕಿನ ಹಡಗಿನಾಳ ಗ್ರಾಮದ ಮುತ್ತೆಪ್ಪ ಶಿವನಾಯಿಕ ನಾಯಿಕ ಅವರ ಕುಟುಂಬಕ್ಕೆ ನಗರದ ಶಾಸಕರ ಕಚೇರಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ಮಂಜೂರಾದ 5 ಲ ರೂ. ಪರಿಹಾರಧನ ಚೆಕ್​ ವಿತರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಹಿಡಕಲ್​ ಜಲಾನಯನ ಮತ್ತು ಪಶ್ಚಿಮಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಟಪ್ರಭಾ ನದಿಗೆ ಪ್ರವಾಹ ಎದುರಾಗಿತ್ತು. ಹಡಗಿನಾಳದ ಮುತ್ತೇಶ್ವರ ದೇವಸ್ಥಾನದ ಬಳಿ ನದಿ ನೀರಿನ ಸೆಳೆತಕ್ಕೆ ಗ್ರಾಮದ ಮುತ್ತೆಪ್ಪ ನಾಯಿಕ ಈಚೆಗೆ ಮೃತಪಟ್ಟಿರುವುದು ನೋವಿನ ವಿಚಾರ. ಕುಟುಂಬಕ್ಕೆ ಸರ್ಕಾರದಿಂದ 5 ಲ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತವನ್ನು ಕುಟುಂಬಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಕಾಕ ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ಮೂಡಲಗಿ ತಹಸೀಲ್ದಾರ್​ ಮಹಾದೇವ ಸಣ್ಮುರಿ, ತಾಪಂ ಮಾಜಿ ಸದಸ್ಯ ನಾಗಪ್ಪ ಮಂಗಿ, ಕೌಜಲಗಿ ಕಂದಾಯ ನಿರೀಕ್ಷಕ ಸುಂದರ ಪೂಜೇರಿ, ಗ್ರಾಮ ಆಡಳಿತ ಅಧಿಕಾರಿ ಜಾಹೀರ್​ ನದಾಫ್​, ವಿಠ್ಠಲ ಆಡಿನ, ಸಿದ್ಧಾರೂಢ ಕಲ್ಲೊಳಿ ಸೇರಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net