ಪ್ರವಾಹ ಮುಂಜಾಗ್ರತಾ ಕ್ರಮಕೈಗೊಳ್ಳಲಿ

15Athanigrameen1
Published on

ಅಥಣಿ ಗ್ರಾಮೀಣ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ೫ ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೆ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮಂಗಳವಾರ ತಹಸೀಲ್ದಾರ್ ಸಿದ್ದರಾಯ ಭೋಸಗಿ ನೇತೃತ್ವದ ತಂಡ ತಾಲೂಕಿನ ಝುಂಜರವಾಡ ಹಾಗೂ ಶಿರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಪಂಚಾಯಿತಿ ಹಾಗೂ ನೋಡಲ್ ಅಧಿಕಾರಿ ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಮಾತನಾಡಿ, ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕೃಷ್ಣಾ ಜಲಾಶಯ ಪ್ರದೇಶದಲ್ಲಿ ಬರುವ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಇಲ್ಲಿರುವ ಕಾಳಜಿ ಕೇಂದ್ರಗಳ ಸ್ವಚ್ಛ ಮಾಡುವಂತೆ ಸೂಚಿಸಿದರು. ಸಂತ್ರಸ್ಥರನ್ನು ಸುರಕ್ಷತೆ ಸ್ಥಳಕ್ಕೆ ಕರೆದೊಯ್ಯಲು ಬೋಟ್ ಪರಿಶೀಲಿಸಿ ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು. ಪ್ರವಾಹ ಸಂದರ್ಭ ಎದುರಿಸಲು ನೇಮಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ಲಕ್ಷಿಸಬಾರದು ಎಂದರು.

ಶಿರಸ್ತೆದಾರ ಮಹಾದೇವ ಬಿರಾದಾರ, ಕಂದಾಯ ನೀರೀಕ್ಷಕ ಸಂಜೀವ ರಾಠೋಡ, ಪಿಡಿಒಗಳಾದ ಸಂತೋಷ ಗುಮಟಿ, ಸಂಗನಗೌಡ ಮಯ್ಯಾಪುರ, ಮುತ್ತಪ್ಪ ಹಿಡಕಲ್ಲ, ಶೀತಲಗೌಡ ಪಾಟೀಲ, ಶ್ರೀಕಾಂತ ಸಂಕೋನಟ್ಟಿ, ಮಹಾವೀರ ಹಳಿಂಗಳಿ, ಅಣ್ಣಾಸಾಬ ಯಂಡೊಳ್ಳಿ, ಗ್ರಾಪಂ ಅಧ್ಯಕ್ಷ ಕುಮಾರ ನೇಮಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net