ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲಿ

26UK1
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹಿಡಕಲ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ವಾರಿಮಾಸ್ತಿಹೊಳಿ ಅಲ್ಲಮಪ್ರಭು ದೇವಸ್ಥಾನ ಹಾಗೂ ಹುನ್ನೂರಿನ ಶ್ರೀ ವಿಠ್ಠಲ ಮಂದಿರಕ್ಕೆ ಕಂದಾಯ ಮತ್ತು ಮುಜರಾಯಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಹಿರಿಯ ಅಽಕಾರಿಗಳ ತಂಡ ಸೋಮವಾರ ಭೇಟಿ ನೀಡಿತು.

ಉಚ್ಚನ್ಯಾಯಾಲಯ ಆದೇಶದನ್ವಯ ದೇವಸ್ಥಾನ ಸ್ಥಳಾಂತರ ವಿಚಾರವಾಗಿ ಗ್ರಾಮಸ್ಥರೊಂದಿಗೆ ಸಂವಾದಿಸಿ ಬಳಿಕ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಹಳೇ ತಹಸೀಲ್ದಾರ್ ಕಚೇರಿಯಲ್ಲಿರುವ ದಾಖಲೆಗಳ ಗಣಕೀಕರಣ ಕೊಠಡಿಗೆ ಭೇಟಿ ನೀಡಿ ಹಳೇ ದಾಖಲಾತಿಗಳನ್ನು ಸಂರಕ್ಷಿಸಬೇಕು. ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು. ಸಂಕೇಶ್ವರ ನಾಡಕಚೇರಿಗೆ ಭೇಟಿ ನೀಡಿ ಹಳೇ ತಹಸೀಲ್ದಾರ್ ಕಚೇರಿ ಪುನರುಜ್ಜೀವನಗೊಳಿಸಲು ತಗಲುವ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ತಹಸೀಲ್ದಾರ್ ಮಂಜುಳಾ ನಾಯಕ, ಗ್ರೇಡ್-೨ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೇದಾರ ಎನ್.ಆರ್.ಪಾಟೀಲ, ಸಿ.ಎ.ಪಾಟೀಲ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಕಂದಾಯ ನಿರೀಕ್ಷಕ ಎಂ.ಬಿ.ಸಾರಾಪುರ, ಎ.ಎಂ.ಕಮತನೂರ, ಗ್ರಾಮ ಲೆಕ್ಕಾಧಿಕಾರಿಯಾದ ಬಸವರಾಜ ಚೌಗಲಾ, ರವಿ ಹುಡೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net