

ಕಲಬುರಗಿ: ಪ್ರಸಕ್ತ ವರ್ಷ ಉತ್ತಮ ಮಳೆಯ ಮುನ್ಸೂಚನೆ ಇದ್ದು, ಪ್ರವಾರ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯಿಂದಲೂ ಸನ್ನದ್ಧರಾಗಿ ಎಂದು ಅಧಿಕಾರಿಗಳಿಗೆ ಕೆಪಿಟಿಸಿಎಲ್ ಎಂಡಿ, ಜಿ¯್ಲÁ ಉಸ್ತುವಾರಿ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಸಲಹೆ ನೀಡಿದರು.
ಜಿ¯್ಲÁಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬರ ನಿರ್ವಹಣೆ, ಮುಂಗಾರು ಹಂಗಾಮು ಸಿದ್ಧತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿ, ಮುಂದಿನ ೨-೩ ತಿಂಗಳು ಕ್ಲಿಷ್ಟಕರ ದಿನಗಳಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಸೂಚಿಸಿದರು.
ಮಳೆಗಾಲದಲ್ಲಿ ಎದುರಾಗುವ ಸಾಂಕ್ರಾಮಿಕ ರೋಗ ಬಗ್ಗೆ ಜಾಗೃತಿ ಮೂಡಿಸಬೇಕು. ಪಿಎಚ್‌ಸಿ ಕೇಂದ್ರ ಸುಸಜ್ಜಿತ ಇಡಬೇಕು. ವಿದ್ಯುತ್ ಪೂರೈಕೆ ಸ್ಥಗಿತವಾದರೆ ಪರ್ಯಾಯವಾಗಿಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಆರ್‌ಜಿ ೧೫೨ ತೊಗರಿ ಬೀಜದ ಬಗ್ಗೆ ರೈತರಿಂದ ಹೆಚ್ಚಿನ ಬೇಡಿಕೆ ಇದ್ದು, ಸಮರ್ಪಕವಾಗಿ ಪೂರೈಸಬೇಕು ಎಂದರು.
ಜAಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಏಪ್ರಿಲ್ ಮತ್ತು ಪ್ರಸಕ್ತ ಮೇನಲ್ಲಿ ಶೇ.೪೪ ಮಳೆ ಹೆಚ್ಚಾಗಿದೆ. ಜೂನ್ ೧ರಿಂದ ಹೆಚ್ಚಿನ ಮಳೆಯ ಮುನ್ಸೂಚನೆ ಇದೆ. ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ತೊಗರಿ ೫,೯೩,೦೫೦ ಹೇಕ್ಟೆರ್, ಹೆಸರು ೫೧,೫೦೦ ಹೇ, ಉದ್ದು ೨೪,೨೫೦ ಹೇ, ಸೋಯಾಬೀನ್ ೪೨,೫೦೦, ಇತರೆ ಬೆಳೆ ೧,೫೪,೫೮೫ ಹೇ ಸೇರಿ ಒಟ್ಟು ೮,೬೫,೮೮೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೂಂದಲಾಗಿದೆ ಎಂದು ಸಭೆಗೆ ತಿಳಿಸಿದರು.
ತೊಗರಿ ೬,೮೦೧.೭೪ ಕ್ವಿಂಟಾಲ್, ಹೆಸರು ೬೪೨.೧೩ ಕ್ವಿಂ, ಉದ್ದು ೪೧೩.೦೭ ಕ್ವಿಂ, ಸೋಯಾಬೀನ್ ೧೧,೨೫೫.೦೫ ಕ್ವಿಂ ಸೇರಿ ಒಟ್ಟು ೧೯,೪೬೧.೨೯ ಕ್ವಿಂಟಲï ಬೀಜ ವಿತರಣೆ ಕಾರ್ಯಕ್ರಮವಿದೆ. ಬೇಡಿಕೆಗಿಂತ ಹೆಚ್ಚು ಬೀಜಗಳಿದ್ದು, ೫,೪೫೯ ಕ್ವಿಂಟಲï ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿಕರಿಸಲಾಗಿದೆ. ಬೀಜ ಕೊರತೆ ಆಗಿಲ್ಲ. ೮೮,೫೯೨ ಮೆಟ್ರಿಕ್ ಟನ್ ರಸಗೂಬ್ಬರ ಬೇಡಿಕೆ ಇದೆ. ೪೯,೧೭೯ ಮೆ.ಟನ್ ದಾಸ್ತಾನು ಇದೆ ಎಂದರು.
ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಂದಾರ ಮಾತನಾಡಿ, ಏಪ್ರಿಲ್‌ನಲ್ಲಿ ೯೨.೫೫ ಹೆಕ್ಟೇರ್, ಮೇನಲ್ಲಿ ೩೪.೩೫ ಹೆ. ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. ಜಂಟಿ ಸರ್ವೇ ನಡೆಸಿ ಡಿ.ಸಿ. ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂದರು.
ಜಿಪA ಸಿಇಒ ಭಂವರ್‌ಸಿAಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್, ಡಿಸಿ ಫೌಜಿಯಾ ತರನ್ನುಮ್ ಮಾತನಾಡಿದರು. ಅಪರ ಜಿ¯್ಲÁಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಸಹಾಯಕ ಆಯುಕ್ತೆ ರೂಪಿಂದರï ಸಿಂಗï ಕೌರï, ಡಿ.ಎಚï.ಓ. ಡಾ. ರತಿಕಾಂತ ಸ್ವಾಮಿ ಸೇರಿದಂತೆ ಜಿ¯್ಲÁ ಮಟ್ಟದ ಅಧಿಕಾರಿಗಳಿದ್ದರು.