ಪ್ರವಾಸೋದ್ಯಮ ಪ್ರಗತಿಗೆ ಛಾಯಾಚಿತ್ರಕಾರರ ಸಹಕಾರ ಅಗತ್ಯ

klb2
ಚಿಂಚೋಳಿ ಚಂದಾಪುರದ ಬಂಜಾರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 185ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮವನ್ನು ಶಾಸಕ ಡಾ.ಅವಿನಾಶ ಜಾಧವ್ ಉದ್ಘಾಟಿಸಿದರು. ವೆಂಕಟೇಶ ದುಗ್ಗನ್, ಕಾಶಿನಾಥ ಧನ್ನಿ, ಡಾ.ಸಂತೋಷ ಪಾಟೀಲ್, ಶರಣಪ್ಪ ಪಾಟೀಲ್, ಗೌತಮ ಬೊಮ್ಮನಳ್ಳಿ, ರಾಹುಲ್ ಯಾಕಾಪುರ, ಮಹಾದೇವ, ಸಂಜೀವಕುಮಾರ ಗಾರಂಪಳ್ಳಿ, ಕೆ.ಎಂ. ಬಾರಿ, ಜಗಜೀವನರೆಡ್ಡಿ ಮಿರಿಯಾಣ, ಪ್ರೇಮಸಿಂಗ್ ಜಾಧವ್, ಗೋಪಾಲರಾವ ಕಟ್ಟಿಮನಿ, ವಿಜಯಕುಮಾರ ಚೆಂಗಟಾ ಇದ್ದರು.
Published on

ಚಿಂಚೋಳಿ: ಉತ್ತಮ ಕಲೆಯಾಗಿರುವ ಫೋಟೋಗ್ರಾಫಿ ದೇವರು ನೀಡಿದ ವರವಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.
ಚಂದಾಪುರದ ಬಂಜಾರ ಭವನದಲ್ಲಿ ಮಂಗಳವಾರ ಛಾಯಾಚಿತ್ರಕಾರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ 185ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲೇ ಅತಿ ದೊಡ್ಡ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ತಾಲೂಕಿನ ಪ್ರವಾಸಿ ತಾಣಗಳ ಕುರಿತು ಹೆಚ್ಚಿನ ಪ್ರಚಾರ ಮಾಡಲು ಛಾಯಾಚಿತ್ರಕಾರರ ಸಹಕಾರ ಅತಿ ಅಗತ್ಯವಾಗಿದೆ ಎಂದರು.

ಕೇವಲ ವಿಶ್ವ ಛಾಯಾಗ್ರಹಣ ದಿನ ಆಚರಿಸದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳು, ಹಿರಿಯ ಫೋಟೋಗ್ರಾರ‍್ಸ್ ಕುಟುಂಬದವರ ಸನ್ಮಾನ ಜತೆ 38ಕ್ಕೂ ಅಧಿಕ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದು ಸಂತಸ ಸಂಗತಿ. ಛಾಯಾಚಿತ್ರಕಾರರ ಕ್ಷೇಮಾಭಿವೃದ್ಧಿಗಾಗಿ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಡಾ.ಸಂತೋಷ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ್, ಬಹುಜನ ಸಮಾಜ ಪಕ್ಷದ ಮುಖಂಡ ಗೌತಮ ಬೊಮ್ಮನಳ್ಳಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಯಾಕಾಪುರ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಬೆಂಗಳೂರಿನ ಮಹಾದೇವ, ಕೆಪಿಎ ತಾಲೂಕು ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ, ಕೆ.ಎಂ. ಬಾರಿ, ಜಗಜೀವನರೆಡ್ಡಿ ಮಿರಿಯಾಣ, ಪ್ರೇಮಸಿಂಗ್ ಜಾಧವ್, ಗೋಪಾಲರಾವ ಕಟ್ಟಿಮನಿ, ವಿಜಯಕುಮಾರ ಚೆಂಗಟಾ, ಪ್ರಕಾಶ ಜಂಗಲೆ, ಗಣಪತಿ ಸಿಂಗಶೆಟ್ಟಿ, ಮಲ್ಲಿಕಾರ್ಜುನ ತುಪ್ಪದಮಠ, ವಿಜಯಕುಮಾರ ರಾಠೋಡ್, ಸಿದ್ರಾಮಪ್ಪ ಕವಡೆ, ವೀರಣ್ಣ ಕಿರಣಿ, ರಾಮಕೃಷ್ಣ ಖಡಕೆ, ಶಿವಬಸಯ್ಯ ಮಠ, ರಮೇಶ ಭೂತಪುರ, ಬಸವರೆಡ್ಡಿ ಮಕಾಶಿ, ಬಸವರಾಜ ಕೆರೊಳ್ಳಿ, ಶಿವರುದ್ರಯ್ಯ ಹಿರೇಮಠ, ಚಂದ್ರಶೇಖರ ಹೂಗಾರ, ನಾಗರಾಜ ಮುತ್ತಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net