

ಗೋಕರ್ಣ: ಉತ್ತರ ಕನ್ನಡದಲ್ಲಿ ಕೈಗಾರಿಕೆಗಳಿಗಿಂತ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಆದರೆ, ಅನೇಕ ವರ್ಷಗಳಿಂದ ಕೆಲವು ಕಾನೂನು ತೊಡಕಿನಿಂದಾಗಿ ಪ್ರವಾಸೋದ್ಯಮ ಬೆಳೆಯಲಿಲ್ಲ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಒಂದು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ವಿುಸಲಾದ ವಿಐಪಿ ಪ್ರವಾಸಿ ಮಂದಿರ (ರ್ಸಟ್-ಹೌಸ್) ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಕರಾವಳಿ ಭಾಗದಲ್ಲಿ ಕರಾವಳಿ ವಲಯ ನಿಯಂತ್ರಣ (ಸಿಆರ್ರೆಡ್) ಕಾಯ್ದೆಯ ಜೊತೆಗೆ ಈಗ ಪುರಾತತ್ವ ಇಲಾಖೆಯ ಕಾನೂನು ಸಹ ಸೇರಿಕೊಂಡು ಯಾವುದೇ ಅಭಿವೃದ್ಧಿಗೆ ಜನ ಹಿಂದೇಟು ಹಾಕುವಂತೆ ಮಾಡಿದೆ. ಗೋಕರ್ಣದಲ್ಲಿಯೂ ಅನೇಕ ಉದ್ಯಮಿಗಳು ದೂರು ಸಲ್ಲಿಸಿ ಈ ಕಾನೂನುಗಳಿಂದ ವಿನಾಯಿತಿಗೆ ಆಗ್ರಹಿಸಿದ್ದಾರೆ. ಗೋವಾ ಮತ್ತು ಕೇರಳದಲ್ಲಿ ಸಿಆರ್ರೆಡ್ ಮಿತಿಯನ್ನು ಕೇವಲ 50 ಮೀಟರ್ಗೆ ನಿಗದಿ ಮಾಡಲಾಗಿದೆ. ಇದೇ ಸವಲತ್ತನ್ನು ರಾಜ್ಯ ಕರಾವಳಿಗೂ ನೀಡುವ ಬಗ್ಗೆ ಕೇಂದ್ರ ಮಟ್ಟದಲ್ಲಿ ಪ್ರಯತ್ನ ಸಾಗಿದೆ ಎಂದು ಹೇಳಿದರು.
ಇದೇ ವೇಳೆ ಪ್ರವಾಸೋದ್ಯಮ ಸ್ಥಳಗಳಲ್ಲಿ ಇ-ಸ್ವತ್ತು ಕಾಯ್ದೆಯಿಂದಲೂ ಉದ್ಯಮಿಗಳು ತೊಂದರೆ ಗೊಳಗಾಗಿದ್ದಾರೆ ಉತ್ತರ ಕನ್ನಡಕ್ಕೆ ಈ ಕಾನೂನಿನಿಂದ ವಿನಾಯಿತಿಗೆ ಸಚಿವರಲ್ಲಿ ಅನೇಕರು ಆಗ್ರಹಿಸಿದರು.
ಈ ವೇಳೆ ಶಾಸಕ ದಿನಕರ ಶೆಟ್ಟಿ, ಕುಮಟಾ ವಿಭಾಗೀಯ ಅಧಿಕಾರಿ ಅಜಿತ್ ಎಂ., ತಹಸೀಲ್ದಾರ್ ಮೇಘರಾಜ ನಾಯ್ಕ, ಪಿಡಬ್ಲ್ಯುಡಿ ಸ.ಇಂಜಿನಿಯರ್ ರಾಜು ಶಾನಭಾಗ, ಅ.ಇಂಜಿನಿಯರ್ ಶಶಿಕಾಂತ ಕೊಳೇಕರ, ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ತಾಪಂ ಸದಸ್ಯ ಮಹೇಶ ಶೆಟ್ಟಿ, ರಾಜೇಶ ನಾಯಕ, ಗ್ರಾಪಂ ಆಡಳಿತಾಧಿಕಾರಿ ಆರ್.ಜಿ. ಗುನಗಿ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಮೋಹನ ನಾಯಕ, ಬಿಜೆಪಿ ಹಿರಿಯ ಮುಖಂಡ ಡಾ.ಎಸ್.ವಿ.ಜಠಾರ, ವಿನೋದ ಪ್ರಭು, ಕುಮಾರ ಮಾರ್ಕಾಂಡೆ ಮುಂತಾದವರಿದ್ದರು.