ಪ್ರವಾಸಿಗರಿಗೆ ಹುಲಿರಾಯನ ದರ್ಶನ

07 HANUR 6
Published on

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಜ್ಜೀಪುರದಲ್ಲಿ ಸಫಾರಿಗೆ ಶುಕ್ರವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ.

ಈ ಸಫಾರಿಯಲ್ಲಿ ಹುಲಿ, ಆನೆ, ಜಿಂಕೆ, ಕಾಡೆಮ್ಮೆ ಹಾಗೂ ಇನ್ನಿತರೆ ಕಾಡು ಪ್ರಾಣಿಗಳಿವೆ. ಪ್ರವಾಸಿಗರಿಗೆ ಎಲ್ಲ ಪ್ರಾಣಿಗಳ ದರ್ಶನವಾಗುತ್ತಿದೆ. ಆದರೆ ಹುಲಿ ಕಾಣಿಸಿಕೊಳ್ಳುವುದು ಅಪರೂಪ. 2 ತಿಂಗಳ ಹಿಂದೆ ಸಫಾರಿಯ ಸುಂಕದಕಟ್ಟೆ ಅರಣ್ಯ ಪ್ರದೇಶದ ಹಳ್ಳದ ಬಳಿಯ ಬಂಡೆಯ ಮೇಲೆ ಹುಲಿ ಕಾಣಿಸಿಕೊಂಡಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದರು. ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ತಿಂಗಳ ಹಿಂದೆಯೂ ಈ ಹುಲಿರಾಯ ಕಾಣಿಸಿಕೊಂಡು ಪ್ರವಾಸಿಗರಿಗೆ ಮುದ ನೀಡಿತ್ತು. ಇದೀಗ ಇದೇ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ 4.30ರಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿದೆ. ವಿಶ್ರಾಂತಿ ಪಡೆಯುತ್ತಿದ್ದ ಹುಲಿ ಪ್ರವಾಸಿಗರನ್ನು ಕಂಡೊಡನೆ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತ ಅರಣ್ಯ ಪ್ರದೇಶದೊಳಗೆ ತೆರಳಿತು. ಪ್ರವಾಸಿಗರೊಬ್ಬರೂ ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net