

ಗುಂಡ್ಲುಪೇಟೆ: ಅರಣ್ಯ ಇಲಾಖೆ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ರೈತ ಮುಖಂಡರು ಭಾನುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾಡ್ರಹಳ್ಳಿ ಮಾತನಾಡಿ, ಮುಜರಾಯಿ ಇಲಾಖೆಗೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯವರು ಗೇಟ್ ನಿರ್ಮಿಸಿದ್ದಾರೆ. ಬೆಟ್ಟದ ಮೇಲೆ ಮಲಯಾಳ ಚಿತ್ರದ ಶೂಟಿಂಗ್ ನಡೆಸಲು ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ಬೆಟ್ಟಕ್ಕೆ ಹೋಗುವ ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ, ಅರಣ್ಯ ರಸ್ತೆಯಲ್ಲಿ ಸಾಗುವ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಆದರೆ ಬೆಟ್ಟಕ್ಕೆ ಹೋಗಲು ಬಸ್ಸಿಗಾಗಿ ಕಾಯುವ ಪ್ರವಾಸಿಗರಿಗೆ ಕನಿಷ್ಠ ನೆರಳು ನೀಡಲು ಕ್ರಮಕೈಗೊಂಡಿಲ್ಲ. ಇದರಿಂದ ದೂರದೂರುಗಳಿಂದ ಬೆಟ್ಟಕ್ಕೆ ಬರುವ ಪ್ರವಾಸಿಗರು ಗೇಟ್ ನಿಂದ ಹೊರಗೆ ಗಂಟೆಗಟ್ಟಲೆ ಬಿಸಿಲು ಮಳೆಯಲ್ಲಿ ಕಾದುನಿಲ್ಲಬೇಕಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದು ಹಣವನ್ನು ಯಾವ ಅಭಿವೃದ್ಧಿಗೆ ಅರಣ್ಯ ಇಲಾಖೆ ಬಳುತಿದ್ದಾರೆ ಇದರ ಬಗ್ಗೆ ಮಾಹಿತಿ ಹಾಗೂ ಬೆಟ್ಟದ ತಪ್ಪಲಿನಲ್ಲಿ ಚೆಕ್‌ಪೋಸ್ಟ್ ಗೆಟ್ ಹಾಕಿರಲಿಲ್ಲ ದೇವಸ್ಥಾನ ಸಾರ್ವಜನಿಕರದು ಇದಕ್ಕೆ ಗೇಟ್ ಹಾಕಿ ಜೀಪ್ ಮೂಲಕ ಹಣ ಮಾಡುತ್ತಿದ್ದಾರೆ. ಜತೆಗೆ ಮೂಲಸೌಕರ್ಯ ನೀಡದೆ ಪಾಕಿರ್ಂಗ್ ಹಣ ಸಂಗ್ರಹಿಸುತ್ತಿರುವುದಕ್ಕೆ ವಿರೋಧವಿದ್ದು ಸರತಿ ಸಾಲಿನ ಶೆಡ್ ನಿರ್ಮಿಸದಿದ್ದರೆ ಹಾಗೂ ಅರ್‌ಟಿಐನಲ್ಲಿ ಕೇಳಿರುವ ಮಾಹಿತಿಗೆ ಮೂರು ತಿಂಗಲಿಂದ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ತಾಲೂಕು ಅಧ್ಯಕ್ಷ ಕಂದೇಗಾಲ ಹೊಸೂರು ಮಹೇಶ್, ಹಸಿರುಸೇನೆ ಅಧ್ಯಕ್ಷ ಹಿರಿಕಾಟಿ ಚಿಕ್ಕಣ್ಣ, ಲೋಕೇಶ್, ಹಾಲಹಳ್ಳಿ ಮಹೇಶ್ ಇದ್ದರು.