ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಅಬ್ಬಿ ಜಲಪಾತ

16.npk-2.
ಅಬ್ಬಿ ಜಲಪಾತದ ಮನಮೋಹಕ ನೋಟ.
Published on

ನಾಪೋಕ್ಲು: ಮುಂಗಾರು ಮಳೆಯಿಂದಾಗಿ ಭೋರ್ಗರೆಯುತ್ತಿರುವ ಹಲವು ಜಲಪಾತಗಳ ಪೈಕಿ ಮಾದಂಡ ಅಬ್ಬಿ ಜಲಪಾತವೂ ಒಂದಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಕೊಡಗಿನಲ್ಲಿ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವು ನದಿಗಳು ಉಗಮಿಸಿ ಹರಿದು ಬರುತ್ತಿವೆಯಾದರೂ ಮಾದಂಡ ಅಬ್ಬಿ ಜಲಪಾತ ಸುಮಾರು ನೂರೈವತ್ತು ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ. ಬಂಡೆಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಈ ಜಲಪಾತ ನೋಡಲು ಮನಮೋಹಕ. ಹಸಿರು ರಾಶಿಯ ನಡುವೆ ಹಾಲ್ನೊರೆಯಂತೆ ಬೀಳುವ ಜಲಪಾತದ ಸೊಬಗು ನೋಡಲು ಎರಡು ಕಣ್ಣು ಸಾಲದು.

ಕಕ್ಕಬೆ ಕುಂಜಲ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದ ಮೂಲಕ ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಎತ್ತರೆತ್ತರಕ್ಕೇರುತ್ತಿದ್ದಂತೆ ಬಲಕ್ಕೆ ತಿರುಗಿ ಸಾಗಿದರೆ ಮಾದಂಡ ಅಬ್ಬಿ ತಲುಪಬಹುದು. ಮಳೆಗಾಲದಲ್ಲಿ ಸಂತೋಷದಿಂದ ಜಲಧಾರೆಯ ಸೊಬಗು ಸವಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net