

ಬೀದರ್: ಪ್ರಕೃತಿ ಸೌಂದರ್ಯ ಸೋಬಗು ನೋಡಿ ಕಣ್ಣುತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ…. ಹೌದು ಜಿಲ್ಲೆಯ ಔರಾದ್ ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ. ದೂರ ಇರುವ ತೇಗಂಪುರ ಕೆರೆ ನಾಲ್ಕೈದು ವರ್ಷಗಳ ನಂತರ ತನ್ನ ವಡಲು ತುಂಬಿ ಹರಿಯುತ್ತಿದ್ದು, ಈ ಮನಮೋಹಕ ದೃಶ್ಯ ಮನ ಸೆಳೆಯುತ್ತಿದೆ.
ಸುಮಾರು 10 ಅಡಿ ಎತ್ತರದಿಂದ ಹಾಲಿನ ನೊರೆಯಂತೆ ಧುಮುಕಿ ಭೋರ್ಗರೆಯುತ್ತಿರುವ ನಿರು ಫಾಲ್ಸ್ಗಿಂತಲೂ ಕಮ್ಮಿ ಇಲ್ಲದೆ ಮನ ಸೆಳೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ನೂರಾರು ಪ್ರವಾಸಿಗರು ದಿನ ನಿತ್ಯ ಕುಟುಂಬ ಸಮೇತ ನೋಡಲು ಆಗಮಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿಗೆ ಬಂದ ಪ್ರವಾಸಿಗರು ಫೋಟೋಗಳನ್ನು ಕ್ಲಿಕ್ಕಿಸಲು ಮುಗಿಬಿಳುತ್ತಿದ್ದಾರೆ